ಸಿಕ್ಸರ್ ಜೊತೆ ಸ್ವೀಟ್ ಶಿಬಾನಿ

ಅಮೆರಿಕದ ನೆಲಕ್ಕೂ ಈಗ ಕ್ರಿಕೆಟ್ ಕಾಲಿಟ್ಟಾಯಿತು. ಬೇಸ್‍ಬಾಲ್‍ನ ಮೈದಾನಕ್ಕೆ ಮಿಲಿಯನ್ ಡಾಲರ್ ಚೆಲ್ಲಿ...
ಶಿಬಾನಿ ದಾಂಡೇಕರ್
ಶಿಬಾನಿ ದಾಂಡೇಕರ್

ಅಮೆರಿಕದ ನೆಲಕ್ಕೂ ಈಗ ಕ್ರಿಕೆಟ್ ಕಾಲಿಟ್ಟಾಯಿತು. ಬೇಸ್‍ಬಾಲ್‍ನ ಮೈದಾನಕ್ಕೆ ಮಿಲಿಯನ್ ಡಾಲರ್ ಚೆಲ್ಲಿ ರೆಡಿಮೇಡ್ ಪಿಚ್ ಸಿದ್ಧವಾಯಿತು. ಮೊದಲ ಪಂದ್ಯದಲ್ಲಿ ತೆಂಡೂಲ್ಕರ್ ಸೋತು, ವಾರ್ನೆ ಗೆದ್ದಿದ್ದೂ ಆಯಿತು. ಕ್ರಿಕೆಟಿನ ಈ ಮಾಜಿ ಸ್ಟಾರ್‍ಗಳ ಆರ್ಭಟದ ನಡುವೆ ಒಬ್ಬಳು ಸುಂದರಿ ಅತ್ತಿತ್ತ ಓಡಾಡುತ್ತ ಕ್ರಿಕೆಟ್‍ಗೆ ಇನ್ನಷ್ಟು ರಂಗು ತುಂಬುತ್ತಿದ್ದಳು. ಸ್ಟೇಡಿಯಮ್ಮಿನಲ್ಲಿದ್ದ ಬೇರೆ ಬೇರೆ ಸ್ಟಾರ್‍ಗಳೆದುರು ಮೈಕ್ ಹಿಡಿದು ಮಾತಿಗೆ ಎಳೆಯುತ್ತಿದ್ದಳು.

ಅಮೆರಿಕನ್ನರಿಗೆ ಕ್ರಿಕೆಟು ಹೊಸತು, ಆದರೆ ಈ ಸುಂದರಿ ಹೊಸಬಳಲ್ಲ. ಆ ಕಾರಣಕ್ಕಾಗಿ ಪ್ರೇಕ್ಷಕರೆಲ್ಲ ಇವಳತ್ತ ಕೂಗುತ್ತಾ ಫ್ಲೈಯಿಂಗ್ ಕಿಸ್ ರವಾನಿಸುತ್ತಿದ್ದರು.ಅವಳು ಶಿಬಾನಿ ದಾಂಡೇಕರ್. ನಾವೂ ಇವಳನ್ನು ಬೇಕಾದಷ್ಟು ಸಲ ಕಂಡಿದ್ದೇವೆ. ಐಪಿಎಲ್‍ನ ಟಾಪ್ 5 ಫೀಲ್ಡ್ ಆಂಕರ್ ಗಳಲ್ಲಿ ಇವಳೂ ಒಬ್ಬಳು.ಕ್ರಿಕೆಟನ್ನು ಜಗವ್ಯಾಪಿ ಮಾಡಲಿಕ್ಕಾಗಿಯೇ ನಡೆಯುತ್ತಿರುವ ಮಾಜಿ ಸ್ಟಾರ್‍ಗಳ ಈ ಟೂರ್ನಿಯಲ್ಲಿ ಇವಳೀಗ ಮಾತಿನ ಇನ್ನಿಂಗ್ಸ್ ಶುರುಮಾಡಿದ್ದಾಳೆ.

ಮೊದಲ ಪಂದ್ಯಕ್ಕೆ ಯಾವ ಫೀಲ್ಡ್ ಆಂಕರ್‍ಗೆ ಅವಕಾಶ ಕೊಡಬೇಕೆಂದು ಚರ್ಚೆ ನಡೆದಾಗ, ಶಿಬಾನಿಯೇ ಆಯ್ಕೆಯಾಗಿದ್ದಕ್ಕೆ ಕೆಲವು ಕಾರಣಗಳಿವೆ. ಪುಣೆಯ ಈ ಹುಡುಗಿ, ಆಸ್ಟ್ರೇಲಿಯಾದಲ್ಲಿ ಬೆಳೆದು, ನಂತರ ಕೆರಿಯರ್ ರೂಪಿಸಿಕೊಳ್ಳಲು ನಡೆದಿದ್ದು ನ್ಯೂಯಾರ್ಕಿನತ್ತ. ಅಮೆರಿಕನ್ ಟಿವಿಗಳಲ್ಲಿ ಕೆಲಸಕ್ಕೆ ಸೇರಿಕೊಂಡಳು. ಹೀಗಾಗಿ ಇವಳು ಅಮೆರಿಕನ್ನರಿಗೆ ಹಳಬಳು. ಶಿಬಾನಿ ನಡೆಸಿಕೊಡುತ್ತಿದ್ದ `ನಮಸ್ತೇ ಅಮೆರಿಕ', `ವಿ-ದೇಸಿ', `ಏಷ್ಯನ್ ವೇರೈಟಿ ಶೋ'ಗಳನ್ನು ಅಲ್ಲಿನವರು ಇನ್ನೂ ಮರೆತಿಲ್ಲ. ಈ ಇಮೇಜನ್ನೇ ಆಧರಿಸಿ ಶಿಬಾನಿಯನ್ನು ಈಗಿನ ಐತಿಹಾಸಿಕ ಕ್ರಿಕೆಟ್ ಟೂರ್ನಿಗೆ ಫೀಲ್ಡ್ ಆಂಕರ್‍ಳನ್ನಾಗಿ ಆರಿಸಲಾಯಿತು.

ಕೇವಲ ಕ್ರಿಕೆಟ್ ಅಲ್ಲ!
ಭಾರತದ ಕೆಲವು ಸ್ಟಾರ್‍ಗಳು ಅಮೆರಿಕಕ್ಕೆ ಹೋದಾಗಲೂ ಅಲ್ಲಿ ಶಿಬಾನಿ ನಿರೂಪಣೆ ನಡೆಸಿಕೊಟ್ಟಿದ್ದಳು. ಈ ಹಿಂದೆ ಶಾರುಖ್‍ ಖಾನ್ ಅಟ್ಲಾಂಟಿಕ್ ಸಿಟಿಗೆ ಹೋದಾಗ `ಆನ್ ಇವೆನಿಂಗ್ ವಿತ್ ಶಾರುಖ್‍ಖಾನ್' ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಇವಳದ್ದು. ಅಮೀರ್‍ಖಾನ್ ನ್ಯೂಜೆರ್ಸಿಗೆ ಹೋದಾಗಲೂ ಆ ಕಾರ್ಯಕ್ರಮದ ಆಂಕರಿಂಗನ್ನು ಕೈಗೆತ್ತಿಕೊಂಡಿದ್ದಳು.ಬಾಲಿವುಡ್‍ನ ಬೇರೆ ಬೇರೆ ಸ್ಟಾರ್‍ಗಳು ಅಲ್ಲಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ಇವಳ ಮುಖ್ಯ ಧ್ವನಿ ಇದ್ದೇ ಇರುತ್ತೆ. ಈಗ ಅಮೆರಿಕದ ಟಿವಿ ಶೋನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ, ಶಿಬಾನಿಯ ಕ್ಲೋಸ್ ಫ್ರೆಂಡ್.

ಒಳ್ಳೆಯ ಸಿಂಗರ್
ಶಿಬಾನಿ ಒಳ್ಳೆಯ ಹಾಡುಗಾತಿಯೂ ಹೌದು. ಶಕೀರಾ, ಮಡೋನ್ನಾ ಅವರ ಪಾಪ್ ಆಲ್ಬಂಗಳನ್ನು ಇವಳು ಅನೇಕ ಸಲ ಸ್ಟೇಜ್ ಮೇಲೆ ಹಾಡಿದ್ದಾಳೆ. ನಿವ್ಯ ಫೇರ್‍ನೆಸ್ ಕಂಪನಿ ತನ್ನ 100ನೇ ವರುಷ ಆಚರಿಸಿಕೊಂಡಾಗಲೂ ಶಿಬಾನಿ ಕಂಠದ ಸೊಗಸನ್ನು ತೆರೆದಿಟ್ಟಿದ್ದಳು.ಬಿಗ್‍ಸಿಬಿಎಸ್ ಪ್ರೈಮ್ ನಡೆಸಿಕೊಟ್ಟ `ಇಂಡಿಯಾಸ್ ಸೆಕ್ಸೀಸ್ಟ್ ಬ್ಯಾಚುಲರ್' ಶೋನಲ್ಲಿ ಈಕೆಯ ಸಂಗೀತದ ಪ್ರತಿಭೆ ಮೊದಲ ಬಾರಿಗೆ ಅನಾವರಣಗೊಂಡಿತ್ತು. ಹಲವು ಜನಪ್ರಿಯ ಜಾಹೀರಾತುಗಳಿಗೆ ಫೋಸು ಕೊಟ್ಟ ಶಿವಾನಿಗೆ ಕ್ರಿಕೆಟಿನಲ್ಲಿ ತೆಂಡೂಲ್ಕರ್, ಧೋನಿ,
ಎಬಿಡಿ ಅಂದ್ರೆ ತುಂಬಾ ಇಷ್ಟವಂತೆ.

ಸದ್ಯಕ್ಕೆ ಟಾಪ್ ಆಂಕರ್
ಭಾರತದಲ್ಲಿ ಕ್ರಿಕೆಟ್‍ನ ಫೀಮೇಲ್ ಆಂಕರ್ ಗಳಲ್ಲಿ ಒಂದು ಪೈಪೋಟಿ ಇದ್ದೇ ಇತ್ತು.ಯಾರು ನಂಬರ್ 1 ಅಂತ. ಅರ್ಚನಾ ವಿಜಯ, ಕರಿಷ್ಮಾ ಕೊಟಾಕ್, ಶೊನಾಲಿ ನಗ್ರಾನಿ, ಮಾಯಂತಿ ಲ್ಯಾಂಗರ್, ಲೇಖಾ ವಾಷಿಂಗ್ಟನ್, ರಾಚೆಲ್ ಮಾರಿಯಾ- ಈ ಹೆಸರುಗಳ ನಡುವೆ ಶಿಬಾನಿಯ ಹೆಸರೂ ಕೇಳಿಬರುತ್ತಿತ್ತು. ಆದರೆ, ಈಗ ಇದು ಫೈನಲ್ಲಾಗಿದೆ. ಕ್ರಿಕೆಟನ್ನು ಜಾಗತಿಕವಾಗಿ ಮಾರ್ಕೆಟ್ ಮಾಡುತ್ತಿರುವ ಈ ಟೈಮಿನಲ್ಲಿ ನಂ.1 ಆಯ್ಕೆಯಾಗಿ ಕಂಡು ಬರುತ್ತಿರೋದು ಶಿಬಾನಿಯೇ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com