
ನವದೆಹಲಿ: 'ರಾಜನೀತಿ', 'ರಾಕ್ ಸ್ಟಾರ್', 'ಯೇ ಜವಾನಿ ಹೈ ದಿವಾನಿ', 'ಬರ್ಫಿ' ಇಂತಹ ವಿಭಿನ್ನ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ದೀಪಿಕಾ ಪಡುಕೋಣೆ ಬಗ್ಗೆ ಅವರ ಸಹನಟ ಬಿಚ್ಚು ಮನಸ್ಸಿನಿಂದ ಪ್ರಶಂಸಿಸಿದ್ದಾರೆ. ಬಿಡುಗಡೆಯಾಗಬೇಕಿರುವ 'ತಮಾಶಾ' ಚಿತ್ರದ ಸಹನಟ ರಣಬೀರ್ ಕಪೂರ್, ತಮ್ಮ ಮಾಜಿ ಗರ್ಲ್ ಫ್ರೆಂಡ್ ದೀಪಿಕಾ ಪಡುಕೋಣೆ ನಟಿಯಾಗಿ ಭಯ ಹುಟ್ಟಿಸುತ್ತಾರೆ ಎಂದಿದ್ದಾರೆ.
"ನಟಿಯಾಗಿ ದೀಪಿಕಾ ಉನ್ನತಿ ಅದ್ಭುತ. ಅವರ ಜೊತೆಗೆ ಕೆಲಸ ಮಾಡಿದಾಗಲೆಲ್ಲಾ ಸಮಾಧಾನವಾಗುತ್ತದೆ. ಅವರನ್ನು ನಟಿಯಂತೆ ಕಾಣುತ್ತೇನೆ ಮತ್ತು ನಟಿಯಾಗಿ ಅವರು ನನಗೆ ಭಯ ಹುಟ್ಟಿಸುತ್ತಾರೆ" ಎಂದು ರಣಬೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಇಬ್ಬರೂ ನಟರು ಈ ಹಿಂದ 'ಬಚನ ಎ ಹಸೀನೋ' ಮತ್ತು 'ಯೇ ಜವಾನಿ ಹೈ ದಿವಾನಿ' ಸಿನೆಮಾಗಳಲ್ಲಿ ನಟಿಸಿದ್ದಾರೆ.
"ನಾನು ಅವರೊಂದಿಗೆ 'ಬಚನ ಎ ಹಸೀನೋ' ಚಿತ್ರದಲ್ಲಿ ನಟಿಸಿದಾಗ ಅವರು ಈಗಲಿಗಿಂತಲೂ ವಿಭಿನ್ನವಾಗಿದ್ದರು. ನಾಚಿಕೆ ಸ್ವಭಾವ ಮತ್ತು ತಮ್ಮೊಳಗೆ ಹುದುಗಿಕೊಂಡುಬಿಡುತ್ತಿದ್ದರು. ನಂತರ ಅವರೊಂದಿಗೆ 'ಯೇ ಜವಾನಿ ಹೈ ದಿವಾನಿ'ಯಲ್ಲಿ ಕೆಲಸ ಮಾಡಿದೆ. ಆಗ ಅವರಿಗೆ ಜೀವನ ಮತ್ತು ಸಿನೆಮಾದ ಮೇಲೆ ಹೆಚ್ಚಿನ ಹಿಡಿತ ಬಂದಿತ್ತು" ಎನ್ನುತ್ತಾರೆ ನಟ.
'ತಮಾಶಾ' ಸಿನೆಮಾ ನವೆಂಬರ್ ೨೭ರಂದು ಬಿಡುಗಡೆಯಾಗಲಿದೆ.
Advertisement