'ವಾಜಿರ್' ಸಿನೆಮಾದಲ್ಲಿ ಅಮಿತಾಬ್ ಬಚ್ಚನ್, ಫರ್ಹಾನ್ ಅಕ್ತರ್
ಬಾಲಿವುಡ್
ಜನವರಿ ೮ ಕ್ಕೆ 'ವಾಜಿರ್' ಬಿಡುಗಡೆ; ಬಾಂಡ್ ಸಿನೆಮಾ ಜೊತೆಗೆ ಟ್ರೇಲರ್ ಬಿಡುಗಡೆ
ಅಮಿತಾಬ್ ಬಚ್ಚನ್, ಫರ್ಹಾನ್ ಅಕ್ತರ್ ಮತ್ತು ಅದಿತಿ ರಾವ್ ಹೈದಾರಿ ನಟಿಸಿರುವ ಬಿಜಾಯ್ ನಂಬಿಯಾರ್ ನಿರ್ದೇಶನದ 'ವಾಜಿರ್' ಮುಂದಿನ ವರ್ಷ ಜನವರಿ ೮
ಮುಂಬೈ: ಅಮಿತಾಬ್ ಬಚ್ಚನ್, ಫರ್ಹಾನ್ ಅಕ್ತರ್ ಮತ್ತು ಅದಿತಿ ರಾವ್ ಹೈದಾರಿ ನಟಿಸಿರುವ ಬಿಜಾಯ್ ನಂಬಿಯಾರ್ ನಿರ್ದೇಶನದ 'ವಾಜಿರ್' ಮುಂದಿನ ವರ್ಷ ಜನವರಿ ೮ ಕ್ಕೆ ಬಿಡುಗಡೆಯಾಗಲಿದೆ.
ಬುಧವಾರ ಸಿನೆಮಾದ ಟ್ರೇಲರ್ ಬಿಡುಗಡೆಯಾಗಲಿದ್ದು, ನವೆಂಬರ್ ೨೦ ರಂದು ಬಿಡುಗಡೆಯಾಗಲಿರುವ ೨೪ನೆ ಜೇಮ್ಸ್ ಬಾಂಡ್ ಸಿನೆಮಾ 'ಸ್ಪೆಕ್ಟ್ರಾ' ಜೊತೆಗೆ ಪ್ರದರ್ಶನ ಕಾಣಲಿದೆ.
ಇದೆ ಮೊದಲ ಬಾರಿಗೆ ಅಮಿತಾಬ್ ಮತ್ತು ಫರ್ಹಾನ್ ಒಟ್ಟಿಗೆ ನಟಿಸುತ್ತಿರುವುದು. ಸಿನೆಮಾದಲ್ಲಿ ೭೩ ವರ್ಷದ ಅಮಿತಾಬ್ ಕಾಶ್ಮೀರಿ ಪಂಡಿತನ ಪಾತ್ರದಲ್ಲಿ ನಟಿಸಿದ್ದರೆ, ೪೧ ವರ್ಷದ ಫರ್ಹಾನ್ ಭಯೋತ್ಪಾದಕ ವಿರೋಧಿ ತಂಡದ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ವಿಧು ವಿನೋದ್ ಚೋಪ್ರಾ, ಆಕಿಬ್ ಖಾನ್ ಮತ್ತು ರಾಜಕುಮಾರ್ ಹಿರಾನಿ ಈ ಸಿನೆಮಾವನ್ನು ಸಹ ನಿರ್ಮಿಸಿದ್ದು ಚೋಪ್ರಾ ಮತ್ತು ಅಭಿಜಿತ್ ಜೋಷಿ ಕಥೆ ಬರೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ