
ಮುಂಬೈ: ಅಮಿತಾಬ್ ಬಚ್ಚನ್, ಫರ್ಹಾನ್ ಅಕ್ತರ್ ಮತ್ತು ನೀಲ್ ನಿತಿನ್ ಮುಖರ್ಜಿ ನಟಿಸಿರುವ ಆಕ್ಷನ್ ಡ್ರಾಮ 'ವಾಜಿರ್' ಸಿನೆಮಾದ ಟ್ರೇಲರ್ ಬುಧವಾರ ಅನಾವರಣಗೊಂಡಿದೆ.
ಶತ್ರು ಪಾತ್ರದಲ್ಲಿರುವ ನೀಲ್ ಮಣಿಸಲು ಫರ್ಹಾನ್, ಅಮಿತಾಬ್ ಅವರ ತಂಡಕ್ಕೆ ಸೇರುವುದನ್ನು ಟ್ರೇಲರ್ ಬಿಚ್ಚಿಟ್ಟಿದೆ.
'ವಾಜಿರ್' ನಲ್ಲಿ ಜಾನ್ ಅಬ್ರಹಾಂ ಮತ್ತು ಅದಿತಿ ರಾವ್ ಹೈದಾರಿ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ.
ಬಿಜಾಯ್ ನಂಬಿಯಾರ್ ಈ ಸಿನೆಮಾವನ್ನು ನಿರ್ದೇಶಿಸಿದ್ದು ವಿಧು ವಿನೋದ್ ಚೋಪ್ರಾ ಸಿನೆಮಾದ ಸಹ ನಿರ್ಮಾಪಕರು. ಸಿನೆಮಾ ಮುಂದಿನ ವರ್ಷ ಜನವರಿ ೮ಕ್ಕೆ ತೆರೆ ಕಾಣಲಿದೆ.
Advertisement