
ನವದೆಹಲಿ: ಸೂರಜ್ ಬರ್ಜತ್ಯ ನಿರ್ದೇಶನದ 'ಪ್ರೇಮ್ ರತನ್ ಧನ್ ಪಾಯೋ'(ಪಿ ಆರ್ ಡಿ ಪಿ) ಭಾರತದಲ್ಲಿ ೨೦೦ ಕೋಟಿ ಗಳಿಕೆ ಕಂಡಿದೆ.
೧೬ ವರ್ಷಗಳ ನಂತರ ಸಲ್ಮಾನ್ ಖಾನ್ ಮತ್ತು ಬರ್ಜತ್ಯ ಜೋಡಿಯಲ್ಲಿ ಮೂಡಿ ಬಂದ ಹಿಂದಿ ಸಿನೆಮಾ ೧೪ ದಿನಗಳಲ್ಲಿ ೨೦೧.೫೨ ಕೋಟಿ ಗಳಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸಿನೆಮಾದಲ್ಲಿ ಸೋನಮ್ ಕಪೂರ್, ಅನುಪಮ್ ಖೇರ್, ನೀಲ್ ನಿತಿನ್ ಮುಖೇಶ್ ಕೂಡ ಅಭಿನಯಿಸಿದ್ದಾರೆ.
೬೦ ಕೋಟಿ ನಿರ್ಮಾಣ ಬಜೆಟ್ ಮತ್ತು ೨೦ ಕೋಟಿ ಪ್ರಚಾರ ಬಜೆಟ್ ನಲ್ಲಿ ನಿರ್ಮಾಣಗೊಂಡ ಈ ಸಿನೆಮಾ ನವೆಂಬರ್ ೧೨ ರಂದು ಬಿಡುಗಡೆಯಾಗಿತ್ತು.
"೨೦೧೫ರಲ್ಲಿ ೨೦೦ ಕೋಟಿ ಗಳಿಕೆ ದಾಟಿದ ಎರಡನೇ ಸಿನೆಮಾ ಪಿ ಆರ್ ಡಿ ಪಿ. ೧೪ ದಿನಗಳಲ್ಲಿ ಭಾರತದಾದ್ಯಂತ ಕಂಡ ಗಳಿಕೆ ೨೦೧.೫೨ ಕೋಟಿ" ಎಂದು ಚಿತ್ರೋದ್ಯಮದ ವ್ಯವಹಾರ ಪಂಡಿತ ಕೋಮಲ್ ನಾಥ ಟ್ವೀಟ್ ಮಾಡಿದ್ದಾರೆ.
ಫಾಕ್ಸ್ ಸ್ಟುಡಿಯೋ ಅರ್ಪಿಸಿದ ಈ ಕೌಟುಂಬಿಕ ಮನರಂಜನಾ ಚಿತ್ರವನ್ನು ರಾಜಶ್ರಿ ಪ್ರೊಡಕ್ಷನ್ಸ್ ನಿರ್ಮಿಸಿತ್ತು. ಈ ಸಿನೆಮಾದ ತೆಲುಗು ಮತ್ತು ತಮಿಳು ಅವತರಿಣೆಕೆಗಳೂ ಕೂಡ ತೆರೆ ಕಂಡಿದ್ದವು.
Advertisement