ವಾರಾಂತ್ಯದಲ್ಲಿ ೯ ಕೋಟಿ ಗಳಿಕೆ ಕಂಡ 'ತಲ್ವಾರ್'

ನೊಯಿಡಾದಲ್ಲಿ ನಡೆದ ಜೋಡಿ ಕೊಲೆ ಆಧಾರಿತ ಸಿನೆಮಾ, ಮೇಘನಾ ಗುಲ್ಜಾರ್ ನಿರ್ದೇಶನದ 'ತಲ್ವಾರ್' ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದೆ. ಇರ್ಫಾನ್ ಖಾನ್ ಮತ್ತು ಕೊಂಕಣಾ ಸೇನ್
'ತಲ್ವಾರ್' ಸಿನೆಮಾದ ಒಂದು ದೃಶ್ಯ
'ತಲ್ವಾರ್' ಸಿನೆಮಾದ ಒಂದು ದೃಶ್ಯ

ಮುಂಬೈ: ನೊಯಿಡಾದಲ್ಲಿ ನಡೆದ ಜೋಡಿ ಕೊಲೆ ಆಧಾರಿತ ಸಿನೆಮಾ, ಮೇಘನಾ ಗುಲ್ಜಾರ್ ನಿರ್ದೇಶನದ 'ತಲ್ವಾರ್' ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದೆ. ಇರ್ಫಾನ್ ಖಾನ್ ಮತ್ತು ಕೊಂಕಣಾ ಸೇನ್ ನಟನೆಯ ಈ ಚಿತ್ರ ವಿಮರ್ಶಕರನ್ನು ಮತ್ತು ಪ್ರೇಕ್ಷರನ್ನು ಒಂದೇ ರೀತಿಯಲ್ಲಿ ಸೆಳೆದಿರುವುದು ಗಮನಾರ್ಹ. ಅಕ್ಷಯ್ ಕುಮಾರ್ ಅವರ ಕಮರ್ಷಿಯಲ್ ಚಿತ್ರ 'ಸಿಂಗ್ ಇಸ್ ಬ್ಲಿಂಗ್' ಬಿಡುಗಡೆಯ ದಿನವೇ ಈ ಸಿನೆಮಾ ಕೂಡ ತೆರೆ ಕಂಡಿದ್ದರು ಬಿಡುಗಡೆಯಾದ ವಾರಾಂತ್ಯಕ್ಕೆ ೯.೨೫ ಕೋಟಿ ಗಳಿಸುವುದರೊಂದಿಗೆ ಗಮನ ಸೆಳೆದಿದೆ.

೨೦೦೮ರಲ್ಲಿ ನೊಯಿಡಾದಲ್ಲಿ ಕೊಲೆಯಾದ ೧೪ ವರ್ಷದ ಬಾಲಕಿ ಅರುಷಿ ತಲ್ವಾರ್ ಮತ್ತು ಕುಟುಂಬದ ಮನೆಗೆಲಸ ಮಾಡುತ್ತಿದ್ದ ವ್ಯಕ್ತಿ ಹೇಮರಾಜ್ ಕೊಲೆ ಆಧಾರಿತ ಈ ಸಿನೆಮಾವನ್ನು ೧೬ ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು, ಬಿಡುಗಡೆಯಾದ ಶುಕ್ರವಾರ ೩ ಕೋಟಿ ಗಳಿಕೆಯನ್ನು ಕಂಡಿದ್ದರೆ ಶನಿವಾರ ಮತ್ತು ಭಾನುವಾರ ಕ್ರಮಾವಾಗಿ ೨.೭೫ ಕೋಟಿ ಮತ್ತು ೩.೫ ಕೋಟಿ ಗಳಿಕೆ ಕಂಡಿರುವುದಾಗಿ ಹೇಳಿಕೆ ತಿಳಿಸಿದೆ.

ಈ ಮಧ್ಯೆ 'ಸಿಂಗ್ ಇಸ್ ಬ್ಲಿಂಗ್' ನ ಮೂರು ದಿನದ ಗಳಿಕೆ ೫೪.೪೪ ಕೋಟಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com