'ಶಾಂದಾರ್' ಸಿನೆಮಾದಲ್ಲಿ ಆಲಿಯಾ ಭಟ್
ಬಾಲಿವುಡ್
'ಶಾಂದಾರ್' ನಲ್ಲಿ ಬಿಕಿನಿ ತೊಡಲು ಸೈಕ್ಲಿಂಗ್ ಸಹಾಯ ಮಾಡಿತು: ಆಲಿಯಾ
'ಶಾಂದಾರ್' ಸಿನೆಮಾದಲ್ಲಿ ಬಿಕಿನಿ ತೊಟ್ಟಿರುವ ಬಾಲಿವುಡ್ ನಟಿ ಆಲಿಯಾ ಭಟ್, ಅದಕ್ಕಾಗಿ ಮೈಕಟ್ಟು ಗಳಿಸಲು ಸೈಕಲಿಂಗ್ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
ಮುಂಬೈ: 'ಶಾಂದಾರ್' ಸಿನೆಮಾದಲ್ಲಿ ಬಿಕಿನಿ ತೊಟ್ಟಿರುವ ಬಾಲಿವುಡ್ ನಟಿ ಆಲಿಯಾ ಭಟ್, ಅದಕ್ಕಾಗಿ ಮೈಕಟ್ಟು ಗಳಿಸಲು ಸೈಕಲಿಂಗ್ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
"ಶೂಟಿಂಗ್ ಮಾಡುತ್ತಿದ್ದ ಪ್ರದೇಶ ಎಷ್ಟು ರಮಣೀಯವಾಗಿತ್ತೆಂದರೆ ಅಲ್ಲಿ ನಾನು ಬಹಳ ಸೈಕಲ್ ಹೊಡೆಯುತ್ತಿದ್ದೆ. ನಾನು ಬಿಕಿನಿ ದೃಶ್ಯಗಳನ್ನು ಶೂಟ್ ಮಾಡಬೇಕಿದ್ದರಿಂದ ಇದು ಬಹಳ ಸಹಾಯ ಮಾಡಿತು" ಎಂದು 'ಶಾಂದಾರ್' ಸಿನೆಮಾದ ಪ್ರಚಾರ ಸಮಯದಲ್ಲಿ ಆಲಿಯಾ ತಿಳಿಸಿದ್ದಾರೆ.
"ರಮಣೀಯ ಪ್ರದೇಶದ ಶುದ್ಧ ಗಾಳಿಯಲ್ಲಿ ನನ್ನನ್ನು ಹೆಚ್ಚೆಚ್ಚು ಜಾಗಿಂಗ್, ವ್ಯಾಯಾಮ ಮಾಡಲು ಪ್ರೇರೇಪಿಸಿದವು. ಇದು ಬಿಕಿನಿ ಚಿತ್ರೀಕರಣದಲ್ಲಿ ಸ್ವಾಭಾವಿಕವಾಗಿ ನಟಿಸಲು ಸಹಾಯ ಮಾಡಿತು. ಮುಂಬೈನಲ್ಲಿ ಇಷ್ಟು ತೆರೆದ ಪ್ರದೇಶ ಸಿಗುವುದು ಕಷ್ಟ. ಇದು ಅದ್ಭುತ ಅನುಭವ ನನಗೆ" ಎಂದು ಅವರು ತಿಳಿಸಿದ್ದಾರೆ.
ಬ್ರಿಟಿಶ್ ಜನರು ಬಹಳ ಸ್ನೇಹಜೀವಿಗಳು ಎಂದು ಕೂಡ ಅವರು ತಿಳಿಸಿದ್ದಾರೆ.
ವಿಕಾಸ್ ಭಾಲ್ ನಿರ್ದೇಶನದ ಈ ಚಿತ್ರ ಅಕ್ಟೋಬರ್ ೨೨ ರಂದು ಬಿಡುಗಡೆಯಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ