
ಮುಂಬಯಿ: ನಾನು ಮತ್ತು ಕಾಜೋಲ್ ಪ್ರಪಂಚದ ಅತಿ ಕೆಟ್ಟ ಡ್ಯಾನ್ಸರ್ಸ್ ಎಂದು ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಹೇಳಿದ್ದಾರೆ.
ಈ ಸಂಬಂಧ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕಾಜೋಲ್ ಮತ್ತು ನನ್ನ ಕೆಮಿಸ್ಟ್ರಿ ಪರದೆ ಮೇಲೆ ಅತಿ ಚೆನ್ನಾಗಿ ಕಾಣುತ್ತೆ ಎಂದು ಪ್ರೇಕ್ಷಕರು ಹೇಳುತ್ತಾರೆ. ಆದರೆ ಡ್ಯಾನ್ಸ್ ನಲ್ಲಿ ನಾವಿಬ್ಬರು ಪ್ರಪಂಚದ ಅತಿ ಕೆಟ್ಟ ಡ್ಯಾನ್ಸರ್ಸ್ ಎಂದು ಹೇಳಿದ್ದಾರೆ.
ಸದಾ ಕೆಲಸದಲ್ಲೇ ಬ್ಯೂಸಿಯಾಗಿರುವ, ಕೆಲಸವನ್ನೇ ಅತಿ ಹೆಚ್ಚು ಪ್ರೀತಿಸುವ, ಕೆಲವೇ ಗಂಟೆ ಮಾತ್ರ ನಿದ್ರಿಸುವ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ನಿನ್ನೆ ರಾತ್ರಿ ಪೂರ್ತಿ ಕಾಜೋಲ್ ಜೊತೆ ಡ್ಯಾನ್ಸ್ ಮಾಡುತ್ತಿದ್ದಾರಂತೆ.
ಶಾರೂಕ್ ಖಾನ್ ಮತ್ತು ಕಾಜೋಲ್ ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ ವಾಲೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಡಿಸೆಂಬರ್ 18 ರಂದು ದಿಲ್ ವಾಲೇ ಚಿತ್ರ ಬಿಡುಗಡೆಯಾಗುತ್ತಿದ್ದು, ಸಂಜಯ್ ಲೀಲಾ ಬನ್ಸಾಲಿ ಅವರ ಬಾಜಿರಾವ್ ಮಸ್ತಾನಿ ಕೂಡ ಅಂದೇ ಬಿಡುಗಡೆಯಾಗುತ್ತಿದೆ.
Advertisement