ಬಾಲಿವುಡ್‌ನಲ್ಲಿ ಖಾನ್‌ಗಳ ಕೋಲ್ಡ್‌ವಾರ್ ನಿಂತಮೇಲೆ ಈಗ ಕ್ವೀನ್‌ಗಳ ಶೀತಲ ಸಮರ ಶುರುವಾಗಿದೆ. ಕಂಗನಾ ರಾಣೌತ್ ನಂ.1 ನಟಿಯಾಗಿ ಸಂಭಾವನೆ ಹೆಚ್ಚಿಸಿಕೊಂಡಿದ್ದು ದೀಪಿಕಾ ಪಡುಕೋಣೆಗೂ ಸಹಿಸಿಕೊಳ್ಳಲಾಗಲಿಲ್ಲ. ಅಲ್ಲದೆ ದೀಪಿಕಾಳ ಫೇರ್‌ನೆಸ್ ಜಾಹೀರಾತುಗಳನ್ನು ಉದ್ದೇಶಿಸಿ ಕಂಗನಾ ವ್ಯಂಗ್ಯ ಮಾಡಿದ್ದಾಯಿತು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ದೀಪಿಕಾ ಈಗ ತನ್ನೆಲ್ಲ ಸಂಭಾವನೆಯನ್ನು ಜಾಸ್ತಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾಳಂತೆ. ಅದರಲ್ಲೂ ಜಾಹೀರಾತಿನ ಸಂಭಾವನೆಯಲ್ಲಿ ಈಕೆ ವಾರ್ಷಿಕ ಎರಡು ಕೋಟಿ ರುಪಾಯಿ ಹೈಕ್ ಕೇಳಿದ್ದಾಳೆ!
ಹೌದು. ಪ್ರಮುಖ ಖಾಸಗಿ ಬ್ಯಾಂಕೊಂದರ ರಾಯಭಾರಿ ಆಗಿರುವ ದೀಪಿಕಾಳ ಕಾಂಟ್ರ್ಯಾಕ್ಟನ್ನು ವಿಸ್ತರಿಸಲಾಗಿದೆ. ಎರಡು ವರ್ಷದ ಹಿಂದಿನ ಅಗ್ರಿಮೆಂಟ್ ಮತ್ತೆ 18 ತಿಂಗಳು ಮುಂದೂಡಲ್ಪಟ್ಟಿದೆ. ಒಟ್ಟಾರೆ ಇದಕ್ಕೆ ದೀಪಿಕಾ ಇಟ್ಟ ಬೇಡಿಕೆ 5.5 ಕೋಟಿ ರುಪಾಯಿ. ಅಷ್ಟಕ್ಕೂ ದೀಪಿಕಾ ಆರ್ಥಿಕವಾಗಿ ಹೆಚ್ಚು ಸ್ವಾವಲಂಬಿಯಾಗಲು ಹೊರಟಿದ್ದಾಳಾ? ಅಪ್ಪನಿಂದ ಪಾಕೆಟ್ ಮನಿಯನ್ನೇ ಪಡೆಯಲಿಲ್ಲ ಎಂದಿದ್ದ ದೀಪಿಕಾ ಹಣ ಗಳಿಕೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾಳಾ? ಗೊತ್ತಿಲ್ಲ.
Advertisement