ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ರೈತ ಕುಟುಂಬಗಳಿಗೆ ಸಹಾಯ ಮಾಡುತ್ತಿರುವ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಕೂಡ ರೈತರ ನೆರವು ನೀಡಲು ಮುಂದಾಗಿದ್ದಾರೆ.
ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಯ ರೈತರ ಸಹಾಯಕ್ಕಾಗಿ ಅಕ್ಷಯ್ 90 ಲಕ್ಷ ರು ನೀಡಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ಈ ಮಹಾ ಕಾರ್ಯವನ್ನು ಪ್ರಚಾರದಿಂದ ದೂರವಿರಿಸಿರುವ ಅಕ್ಷಯ್ ಮುಂದಿನ 6 ತಿಂಗಳಲ್ಲಿ ಪ್ರತಿ ಜಿಲ್ಲೆಯ 30 ರೈತರಿಗೆ 50ಸಾವಿರ ರು. ಆರ್ಥಿಕ ನೆರವು ನೀಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಹಿಂದೆ ನಟ ನಾನಾ ಪಾಟೇಕರ್ ಹಾಗೂ ಕ್ರಿಕೆಟರ್ ಅಂಜಿಕ್ಯ ರೆಹಾನೆ ಮಹಾರಾಷ್ಟ್ರದ ರೈತ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಈಗ ಅಕ್ಷಯ್ ಕುಮಾರ್ ಕೂಡ ಅದೇ ದಾರಿಯಲ್ಲಿ ಸಾಗುತ್ತಿರುವುದು ಖುಷಿಯ ವಿಚಾರ.