
ನವದೆಹಲಿ: ಬಾಲಿವುಡ್ ಮೆಗಾಸ್ಟಾರ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಟ್ವಿಟರ್ ನಲ್ಲಿ 17 ದಶಲಕ್ಷ ಅಭಿಮಾನಿಗಳಿದ್ದಾರಂತೆ.
ತಮಗೆ ಇಷ್ಟೊಂದು ಪ್ರಮಾಣದ ಅಭಿಮಾನಿ ಬಳಗ ಇರುವುದಕ್ಕೆ ಅಮಿತಾಬ್ ಬಚ್ಚನ್ ಗೆ ತುಂಬಾ ಹೆಮ್ಮೆ ಹಾಗೂ ಖುಷಿ ಇದೆಯಂತೆ. ತಮ್ಮ ಪ್ರತಿಯೊಂದು ಸಂತೋಷವನ್ನು ಬಿಗ್ ಬಿ ತಮ್ಮ ಟ್ವೀಟರ್ ಫ್ಯಾನ್ಸ್ ಗಳೊಂದಿಗೆ ಹಂಚಿಕೊಳ್ಳುತ್ತಾರಂತೆ.
ತಮ್ಮನ್ನು ಇಷ್ಟು ವರ್ಷ ಬೆಳೆಸಿ ಪ್ರೋತ್ಸಾಹಿಸುತ್ತಿರುವ ಅಭಿಮಾನಿಗಳಿಗೆ ಬಿಗ್ ಬಿ ಟ್ವಿಟರ್ ನಲ್ಲಿ ಧನ್ಯವಾದ ಹೇಳಿದ್ದಾರೆ. ಇನ್ನು ಅಮಿತಾಬ್ ಬಚ್ಚನ್ ಪ್ರತಿ ನಿತ್ಯ ಟ್ವಿಟರ್ ನಲ್ಲಿ ಅಭಿಮಾನಿಗಳ ಜೊತೆ ಒಡನಾಟ ಇಟ್ಟುಕೊಂಡಿದ್ದು, ತಮ್ಮ ಮನೆಗೆ ಬಂದ ತಮ್ಮನ್ನು ಭೇಟಿ ಮಾಡುವ ಅಭಿಮಾನಿಗಳ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement