
ಮುಂಬಯಿ: ಡೆಲ್ಲಿ ಬೆಲ್ಲಿ ಚಿತ್ರದಲ್ಲಿ ಅಮೀರ್ ಖಾನ್, ಸನ್ನಿ ಲಿಯೋನ್ ನಟಿಸುತ್ತಿದ್ದಾರೆ ಎಂದು ಹರಡಿದ್ದ ಗಾಳಿ ಸುದ್ದಿಗೆ ನಟ ಆಮೀರ್ ಖಾನ್ ತೆರೆ ಎಳೆದಿದ್ದಾರೆ.
ಸನ್ನಿ ಲಿಯೋನ್ ಜತೆಗೆ ಅಭಿನಯಿಸಲು ನಾನು ಸಹಿ ಹಾಕಿಲ್ಲ, ಆದ್ರೆ ಅವರ ಜತೆ ನಟಿಸಲು ಇಚ್ಛಿಸುತ್ತೇನೆ ಎಂದು ಅಮೀರ್ ಖಾನ್ ಹೇಳಿದ್ದಾರೆ. 'ಡೆಲ್ಲಿ ಬೆಲ್ಲಿ' ಚಿತ್ರಕ್ಕಾಗಿ ಅಮೀರ್ -ಸನ್ನಿ ಜತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಇವೆಂಟ್‌ನಲ್ಲಿ ಭಾಗಿಯಾಗಿದ್ದ ಅಮೀರ್ ಖಾನ್ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಚಿತ್ರಜಗತ್ತಿನಲ್ಲಿ ಮಿಸ್ಟರ್ ಪರ್‌ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಅಮೀರ್ ಖಾನ್ 'ಖಯಾಮತ್ ಸೇ ಖಯಾಮತ್ ತಕ್' ಚಿತ್ರದಿಂದ ಇತ್ತೀಚಿನ 3 ಈಡಿಯಟ್ಸ್, ಪಿಕೆ, ವರೆಗೆ ಅಮೀರ್ ಖಾನ್ ಬಹುತೇಕ ಹಿಟ್ ಚಿತ್ರಗಳನ್ನೇ ನೀಡಿದ್ದಾರೆ.
Advertisement