ಕಪಿಲ್ ಶರ್ಮಾ
ಬಾಲಿವುಡ್
ನಟ ಕಪಿಲ್ ಶರ್ಮಾ ವಿರುದ್ಧ ಎಫ್ ಐ ಆರ್
ಕಾಮಿಡಿ ನಟ ಕಪಿಲ್ ಶರ್ಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮುಂಬಯಿನ ವರ್ಸೋವಾ ಪ್ರದೇಶದಲ್ಲಿ ಮ್ಯಾಂಗ್ರೋವ್ಸ್ ನಾಶ ಪಡಿಸಿದ ಹಿನ್ನೆಲೆಯಲ್ಲಿ ಕಪಿಲ್ ಶರ್ಮಾ..
ಮುಂಬಯಿ: ಕಾಮಿಡಿ ನಟ ಕಪಿಲ್ ಶರ್ಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಮುಂಬಯಿನ ವರ್ಸೋವಾ ಪ್ರದೇಶದಲ್ಲಿ ಮ್ಯಾಂಗ್ರೋವ್ಸ್ ನಾಶ ಪಡಿಸಿದ ಹಿನ್ನೆಲೆಯಲ್ಲಿ ಕಪಿಲ್ ಶರ್ಮಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ,
ಪರಿಸರ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕಪಿಲ್ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ. ತಮ್ಮ ಬಂಗ್ಲೆಯ ಹಿಂದಿನ ವರ್ಸೋವಾ ಪ್ರದೇಶದಲ್ಲಿ ಮ್ಯಾಂಗ್ರೋವ್ ಬಳಿ ಕಸ ಸುರಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.
ಈ ಹಿಂದೆ ಸೆಪ್ಟಂಬರ್ 5 ರಂದು ಮುಂಬಯಿ ಮಹಾನಗರ ಪಾಲಿಕೆ ತನ್ನಿಂದ 5 ಲಕ್ಷ ರು ಲಂಚ ಕೇಳಿದೆ ಎಂದು ಹೇಳಿ ಕಪಿಲ್ ಶರ್ಮಾ ಸುದ್ದಿಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ