ಪುತ್ರಿ ಮಿಶಾಳ ಮೊದಲ ಫೋಟೋ ಹಂಚಿಕೊಂಡ ನಟ ಶಾಹಿದ್ ಕಪೂರ್

ಪುತ್ರಿ ಮಿಶಾಳ ಫೋಟೋವನ್ನು ಬಾಲಿವುಡ್ ನಟ ಶಾಹಿದ್ ಕಪೂರ್ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಹಂಚಿಕೊಂಡಿದ್ದಾರೆ. ಶಾಹಿದ್-ಮೀರಾ ರಾಜಪುತ್ ದಂಪತಿಗೆ ಈ ವರ್ಷದ
ಪುತ್ರಿ ಮಿಶಾಳ ಮೊದಲ ಫೋಟೋ ಹಂಚಿಕೊಂಡ ನಟ ಶಾಹಿದ್ ಕಪೂರ್
ಪುತ್ರಿ ಮಿಶಾಳ ಮೊದಲ ಫೋಟೋ ಹಂಚಿಕೊಂಡ ನಟ ಶಾಹಿದ್ ಕಪೂರ್
ಮುಂಬೈ: ಪುತ್ರಿ ಮಿಶಾಳ ಫೋಟೋವನ್ನು ಬಾಲಿವುಡ್ ನಟ ಶಾಹಿದ್ ಕಪೂರ್ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಹಂಚಿಕೊಂಡಿದ್ದಾರೆ. ಶಾಹಿದ್-ಮೀರಾ ರಾಜಪುತ್ ದಂಪತಿಗೆ ಈ ವರ್ಷದ ಮಧ್ಯಭಾಗದಲ್ಲಿ ಹೆಣ್ಣು ಮಗು ಜನಿಸಿತ್ತು. 
ಈ ಫೋಟೋ ಮೂಲಕ ಮಗಳ ಮುಖವನ್ನು ತೋರಿಸದೆ ಹೋದರು, ಶಾಹಿದ್ ಮಿಶಾಳ ಪುಟ್ಟ ಪಾದಗಳ ದರ್ಶನ ಮಾಡಿಸಿದ್ದಾರೆ. ಕಂಡು ಬಣ್ಣದ ಶೂಗಳನ್ನು ತೊಟ್ಟಿರುವ ಮಿಶಾಳ ಫೋಟೋವನ್ನು ಇನ್ಸ್ಟಾಗ್ರಾಮ್ ಮೂಲಕ ಶಾಹಿದ್ ಹಂಚಿಕೊಂಡಿದ್ದಾರೆ. 
'ಮಿ-ಷೂ' ಎಂದು ಶಾಹಿದ್ ಈ ಫೋಟೋಗೆ ಶೀರ್ಷಿಕೆ ನೀಡಿದ್ದು, ಹೃದಯದ ಎಮೋಜಿ ಸೇರಿಸಿದ್ದಾರೆ. 
ಮಿಶಾ ಆಗಸ್ಟ್ ೨೬ರಂದು ಜನಿಸಿದ್ದಳು. ಕರಣ್ ಜೋಹರ್ ಅವರ 'ಕಾಫಿ ವಿಥ್ ಕರಣ್' ಜನಪ್ರಿಯ ಕಾರ್ಯಕ್ರಮದಲ್ಲಿ ಶಾಹಿದ್ ಮತ್ತು ಮೀರಾ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಭಾನುವಾರ ಪ್ರಸಾರವಾಗಲಿದೆ. 
ಸದ್ಯಕ್ಕೆ ಶಾಹಿದ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯವರ 'ಪದ್ಮಾವತಿ'ಯಲ್ಲಿ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಜೊತೆಗೆ ನಟಿಸುತ್ತಿದ್ದಾರೆ. ಹಾಗೆಯೇ ವಿಶಾಲ್ ಭಾರದ್ವಾಜ್ ಅವರ 'ರಂಗೂನ್' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com