
ಮಿಸ್ ಮಾಲಿನಿ.ಕಾಂನ ವರದಿಯ ಪ್ರಕಾರ, 'ತಮಾಶಾ' ಚಲನಚಿತ್ರದ ನಟರಾದ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ತಾವು ಪಡೆದ ಸಂಭಾವನೆಯನ್ನು ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ ಎಂದು ನಂಬಲಾಗಿದೆ.
ಈ ವರದಿಯ ಪ್ರಕಾರ ರಣಬೀರ್ ೧೦ ಕೋಟಿ ಮತ್ತು ದೀಪಿಕಾ ಪಡುಕೋಣೆ ೫ ಕೋಟಿ ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.
'ತಮಾಶಾ' ವಿಮರ್ಶಕರಿಂದ ಒಳ್ಳೆಯ ವಿಮರ್ಶೆ ಗಳಿಸಿದರೂ ಬಾಕ್ಸ್ ಆಫೀಸಿನಲ್ಲಿ ಒಳ್ಳೆಯ ಗಳಿಕೆ ಕಾಣಲು ಸಿನೆಮಾ ವಿಫಲವಾಯಿತು. ಅತಿ ಹೆಚ್ಚು ಬಜೆಟ್ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸಾಮಾನ್ಯ ಗಳಿಕೆ ಕಂಡ ಸಿನೆಮಾಗಳಡಿ ಪಟ್ಟಿಯಾಯಿತು.
ನಿರ್ಮಾಪಕ ಸಾಜಿದ್ ನಾಡಿಯಡ್ವಾಲಾ ಮತ್ತು ಯು ಟಿ ವಿ ಸಂಸ್ಥೆಗೆ ಉಂಟಾಗಿರುವ ನಷ್ಟದಲ್ಲಿ ಒಂದು ಭಾಗವನ್ನು ಭರಿಸಿಕೊಡಲು ಈ ಜೋಡಿ ಮುಂದಾಗಿರುವುದು ಉದಾತ್ತ ನಡೆ ಎನ್ನಲಾಗಿದೆ.
ಈ ಹಿಂದ 'ಬಾಂಬೆ ವೆಲ್ವೆಟ್' ಸೋತಾಗ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ತಮ್ಮ ನಿರ್ಮಾಣ ವೆಚ್ಚವನ್ನು ಹಿಂದಿರುಗಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Advertisement