
ನವದೆಹಲಿ: ಅಂತರಾಷ್ಟ್ರೀಯ ಖ್ಯಾತಿಯ ನಟ ಇರ್ಫಾನ್ ಖಾನ್ ಬಾಲಿವುಡ್ ಮತ್ತು ಹಾಲಿವುಡ್ ಸಿನೆಮಾಗಳಲ್ಲಿ ತಮ್ಮ ಛಾಪು ಮೂಡಿಸಿರುವುದು ಈಗಾಗಲೇ ದಂತಕತೆಯಾಗಿದೆ. ಇಂದಿಗೆ ಅವರು ೪೯ನೆಯ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಈ ನಟನ ಸಾಲಿನಲ್ಲಿ 'ಇನ್ಫರ್ನೋ', 'ದಿ ವಿಕೆಡ್ ಪಾತ್' ಮತ್ತು 'ದ ಸಾಂಗ್ ಆಫ್ ಸ್ಕಾರ್ಪಿಯಾನ್ಸ್' ಸಿನೆಮಾಗಳಿದ್ದು, ಉಜ್ವಲ ವರ್ಷದ ನಿರೀಕ್ಷೆಯಲ್ಲಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಜನಿಸಿದ್ದ ಇರ್ಫಾನ್, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಟನೆ ಕಲಿತವರು. ನಂತರ ಟಿವಿ ಕಾರ್ಯಕ್ರಮಗಳಾದ 'ಚಾಣಕ್ಯ', 'ಭಾರತ್ ಏಕ್ ಕೋಜ್', 'ಸಾರ ಜಹಾಃ ಹಮಾರಾ', 'ಚಂದ್ರಕಾಂತ', ಮುಂತಾದುವುಗಳಲ್ಲಿ ಕಾಣಿಸಿಕೊಂಡಿದ್ದರು.
ನಟನಿಗೆ 'ಮಕ್ಬೂಲ್' ಬಾಲಿವುಡ್ ನಲ್ಲಿ ಅತಿ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟ ಚಿತ್ರವಾದರೆ ಇತ್ತೀಚಿಗೆ ನಟಿಸಿದ 'ದ ಲಂಚ್ ಬಾಕ್ಸ್' ಕೂಡ್ ವಿಮರ್ಷಕರ ಅಪಾರ ಮೆಚ್ಚುಗೆ ಗಳಿಸಿದ ಚಿತ್ರ. ಇವರು ನಟಿಸಿದ 'ಪಿಕು' ಚಿತ್ರ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು.
ಹಾಲಿವುಡ್ ಚಿತ್ರಗಳಾದ 'ಸ್ಲಂ ಡಾಗ್ ಮಿಲಿಯನೇರ್', 'ಲೈಫ್ ಆಫ್ ಪೈ', 'ಜುರಾಸಿಕ್ ವರ್ಲ್ಡ್' ಚಿತ್ರಗಳು ಈ ನಟನಿಗೆ ಅಂತರಾಷ್ಟ್ರೀಯ ಖ್ಯಾತಿ ತಂದುಕೊಟ್ಟಂತವು!
Advertisement