ಸ್ವಯಂ ಉಡುಗೊರೆಯಾಗಿ ಹುಟ್ಟುಹಬ್ಬಕ್ಕೆ ರಾಲ್ಸ್ ರಾಯ್ಸ್ ಕೊಂಡ ಹೃತಿಕ್?

'ಲೌಖಿಕ ಮತ್ತು ಆಧ್ಯಾತ್ಮಿಕ' ಜೀವನಗಳನ್ನು ಸಮನಾಗಿ ಅನುಭವಿಸಬೇಕು ಎಂದು ನಂಬುವ ನಟ ಹೃತಿಕ್ ರೋಶನ್ ತಮ್ಮ ೪೨ನೆ ಹುಟ್ಟುಹಬ್ಬದ ಉಡುಗೊರೆಯಾಗಿ ರಾಲ್ಸ್ ರಾಯ್ಸ್ ಕೊಂಡಿದ್ದಾರೆ
ನಟ ಹೃತಿಕ್ ರೋಶನ್
ನಟ ಹೃತಿಕ್ ರೋಶನ್
Updated on

ಮುಂಬೈ: 'ಲೌಖಿಕ ಮತ್ತು ಆಧ್ಯಾತ್ಮಿಕ' ಜೀವನಗಳನ್ನು ಸಮನಾಗಿ ಅನುಭವಿಸಬೇಕು ಎಂದು ನಂಬುವ ನಟ ಹೃತಿಕ್ ರೋಶನ್ ತಮ್ಮ ೪೨ನೆ ಹುಟ್ಟುಹಬ್ಬದ ಉಡುಗೊರೆಯಾಗಿ ರಾಲ್ಸ್ ರಾಯ್ಸ್ ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಹುಟ್ಟುಹಬ್ಬ ಆಚರಿಕೊಂಡ ಹೃತಿಕ್ ರೋಶನ್ ಅವರನ್ನು ರಾಲ್ಸ್ ರಾಯ್ಸ್ ಹೊಂದಿರುವುದರ ಬಗ್ಗೆ ಪ್ರಶ್ನಿಸಿದಾಗ "ಜೀವನದಲ್ಲಿ ಲೌಖಿಕ ಮತ್ತು ಅಧ್ಯಾತ್ಮಿಕ ಜೀವನಗಳನ್ನು ಸಮನಾಗಿ ಅನುಭವಿಸಬೇಕು. ಈ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು" ಎಂದು ತಾತ್ವಿಕವಾಗಿ ಉತ್ತರಿಸಿದ್ದಾರೆ.

ಈ ಸಮತೋಲನವನ್ನು ಹೇಗೆ ಕಾಯ್ದುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ "ಕೆಲವರು ವಸ್ತುಗಳು ಅಷ್ಟು ಪ್ರಮುಖವಲ್ಲ ಎಂದು ನಂಬುತ್ತಾರೆ, ಆದರೆ ಅದು ನಿಜವಲ್ಲ. ಎಲ್ಲರು ಔತಣ ಕೂಟ ಮಾಡಬೇಕು, ಜಿಮ್ ಗೆ ಹೋಗಬೇಕು, ಗೆಳೆಯರನ್ನು ಕೂಡಿ ಒಳ್ಳೆಯ ಸಮಯ ಕಳೆಯಬೇಕು ಮತ್ತು ಖುಷಿ ಪಡಬೇಕು. ನಾನು ಇವೆಲ್ಲವನ್ನೂ ಮಾಡುತ್ತೇನೆ" ಎಂದಿದ್ದಾರೆ.

"ನನ್ನ ಹುಟ್ಟುಹಬ್ಬ ಖುಷಿಯೊಂದಿಗೆ ಪ್ರಾರಂಭವಾಗಿದೆ ಆದುದರಿಂದ ಈ ವರ್ಷವೆಲ್ಲ ಖುಷಿಯ ವಾತಾವರಣದಿಂದ ಕೂಡಿರುತ್ತದೆ. ನಾನು ಖುಷಿಯಿಂದ ಮತ್ತು ಶಕ್ತಿಯುತವಾಗಿದ್ದೇನೆ. ಈ ವರ್ಷ ಬಹಳ ವಿಶೇಷವೊಂದು ಘಟಿಸಲಿದೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com