ಶ್ರದ್ಧಾ ಕಪೂರ್
ಬಾಲಿವುಡ್
ಶ್ರದ್ಧಾಗೆ ದಿಢೀರ್ ಧೈರ್ಯ ಬಂತು!
ಈ ದಿನಗಳಲ್ಲಿ ಎಲ್ಲ ನಟಿಯರು ಆ್ಯಕ್ಷನ್ ಪಾತ್ರಗಳ ಹಿಂದೆ ಬಿದ್ದಿದ್ದಾರೆ. ತಾನು ಮಾತ್ರ ಅಂಥ ಪಾತ್ರಗಳಿಗೆ ಹೆದರಿ ಕೂರುತ್ತಿದ್ದೇನೆ ಅಂತ ಶ್ರದ್ಧಾ ಕಪೂರ್‍ಗೆ ಅನ್ನಿಸಿತ್ತು. ಆದರೆ, ಈಗ ಶ್ರದ್ಧಾಗೆ ವಿಪರೀತ ಧೈರ್ಯ ಬಂದಿದೆ.
ಈ ದಿನಗಳಲ್ಲಿ ಎಲ್ಲ ನಟಿಯರು ಆ್ಯಕ್ಷನ್ ಪಾತ್ರಗಳ ಹಿಂದೆ ಬಿದ್ದಿದ್ದಾರೆ. ತಾನು ಮಾತ್ರ ಅಂಥ ಪಾತ್ರಗಳಿಗೆ ಹೆದರಿ ಕೂರುತ್ತಿದ್ದೇನೆ ಅಂತ ಶ್ರದ್ಧಾ ಕಪೂರ್‍ಗೆ ಅನ್ನಿಸಿತ್ತು. ಆದರೆ, ಈಗ ಶ್ರದ್ಧಾಗೆ ವಿಪರೀತ ಧೈರ್ಯ ಬಂದಿದೆ.
ಆಗಿದ್ದು ಇಷ್ಟು. `ಆಶಿಖಿ 2' ಖ್ಯಾತಿಯ ಈ ನಟಿ ಲ್ಯಾಕ್ಮಿ ಕಂಪನಿಯ ಜಾಹೀರಾತಿಗೆ ನಟಿಸಲು ಆಫರ್ ಬಂತು. `ಹ್ಞೂಂ' ಎಂದಳು. ಆದರೆ, ಈ ಜಾಹೀರಾತಿನ ಸ್ಕ್ರಿಪ್ಟ್ ಬೇರೆಯ ರೀತಿಯೇ ಇತ್ತು. ಮುಂಬೈನ ಫೈವ್‍ಸ್ಟಾರ್ ಹೋಟೆಲ್ಲೊಂದರ 34ನೇ ಮಹಡಿಯಲ್ಲಿ ಸ್ಟಂಟ್ ಮಾಡಬೇಕಿತ್ತು ಶ್ರದ್ಧಾ. ನುರಿತ ಸ್ಟಂಟ್ ಮಾಸ್ಟರ್ ಗಳಿಂದ ಇದನ್ನು ಸಲೀಸಾಗಿ ಮಾಡಿ, ಬಿಲ್ಡಿಂಗ್ ಏರಿದಳಂತೆ. ಸ್ಟಂಟ್ ಎನ್ನುವುದು ನೀರು ಕುಡಿದಷ್ಟು ಸಲೀಸು ಅಂತ ಅನ್ನಿಸಿದ್ದು ಇದೇ ಮೊದಲು ಎನ್ನುತ್ತಿರುವ ಈಕೆಗೆ ಈಗ ಆ್ಯಕ್ಷನ್ ಪಾತ್ರವಿರುವ ಸಿನಿಮಾವೇ ಬೇಕಂತೆ!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ