ಗುರ್ಮೀತ್ ರಾಮ್ ರಹೀಂ ಅವರನ್ನು ಅನುಕರಣೆ ಮಾಡಿದ ಕಾಮಿಡಿ ನೈಟ್ಸ್ 'ಪಲಕ್‌'ಗೆ ನ್ಯಾಯಾಂಗ ಬಂಧನ

ಜನಪ್ರಿಯ ಟೀವಿ ಶೋ ಕಾಮಿಡಿ ನೈಟ್ಸ್ ವಿಥ್ ಕಪಿಲ್ ನಲ್ಲಿ ದೇರಾ ಸಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅವರನ್ನು ಅನುಕರಣೆ...
ಕಾಮಿಡಿ ನೈಟ್ಸ್ ವಿಥ್ ಕಪಿಲ್ ಶೋ ನಲ್ಲಿ ಪಲಕ್  (ಕೃಪೆ: ಟ್ವಿಟರ್ )
ಕಾಮಿಡಿ ನೈಟ್ಸ್ ವಿಥ್ ಕಪಿಲ್ ಶೋ ನಲ್ಲಿ ಪಲಕ್ (ಕೃಪೆ: ಟ್ವಿಟರ್ )
ನವದೆಹಲಿ: ಜನಪ್ರಿಯ ಟೀವಿ ಶೋ ಕಾಮಿಡಿ ನೈಟ್ಸ್ ವಿಥ್ ಕಪಿಲ್ ನಲ್ಲಿ ದೇರಾ ಸಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅವರನ್ನು ಅನುಕರಣೆ ಮಾಡಿದುದಕ್ಕಾಗಿ  ನಟ ಕಿಕೂ ಶಾರ್ದಾ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ .
ಕಾಮಿಡಿ ನೈಟ್ಸ್ ವಿಥ್ ಕಪಿಲ್‌ನಲ್ಲಿ ಪಲಕ್ ಪಾತ್ರ ನಿರ್ವಹಿಸುತ್ತಿರುವ ಕಿಕೂ ಡಿಸೆಂಬರ್ 27, 2015ರಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಗುರ್ಮೀತ್ ಅವರ ಅವರನ್ನು ಅನುಕರಣೆ ಮಾಡಿದ್ದರು. ಈ ಅನುಕರಣೆಯ ಬಗ್ಗೆ ಗುರ್ಮೀತ್ ಅನುಯಾಯಿಗಳು ಆಕ್ಷೇಪ ವ್ಯಕ್ತ ಪಡಿಸಿ ದೂರು ನೀಡಿದ್ದರು.  
ಇದೀಗ ಕಿಕೂ ಅವರ ವಿರುದ್ಧ  ಭಾರತೀಯ ದಂಡ ಸಂಹಿತೆ ಸೆಕ್ಷನ್ 295 ಎ ಅಡಿಯಲ್ಲಿ, ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಕೇಸು ದಾಖಲಿಸಲಾಗಿದೆ.
ಈ ಶೋ ಪ್ರಸಾರವಾದ ಮರುದಿನ ಕಿಕೂ ಅವರು ತಮ್ಮ ಟ್ವಿಟರ್ ನಲ್ಲಿ, ಸ್ನೇಹಿತರೇ ಈ ಶೋ ನಿಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದರೆ ನಾನು ಗುರ್ಮೀತ್‌ರಾಮ್ ರಹೀಂ ಜಿ ಅವರಲ್ಲಿ ಮತ್ತು ಅನುಯಾಯಿಗಳಲ್ಲಿ ಕ್ಷಮೆ ಕೇಳುತ್ತೇನೆ. ಸಂತೋಷನನ್ನು ಪಸರಿಸೋಣ ಎಂದು ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com