
ನವದೆಹಲಿ: ಬಾಲಿವುಡ್ ನಲ್ಲಿ ಮೂರು ದಶಕಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿರುವ ಅಕ್ಷಯ್ ಕುಮಾರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಜಾಹೀರಾತು 'ಇನ್ಕ್ರೆಡಿಬಲ್ ಇಂಡಿಯಾ' ಅಭಿಯಾನದ ಭಾಗವಾಗಲು ಇಷ್ಟ ಎಂದಿದ್ದಾರೆ.
ಈ ಹಿಂದೆ ಈ ಜಾಹೀರಾತು ರೂಪಿಸುತ್ತಿದ್ದ ಸಂಸ್ಥೆಯ ಜೊತೆಗೆ ಭಾಗವಾಗಿದ್ದ ಬಾಲಿವುಡ್ ನಟ ಅಮೀರ್ ಖಾನ್ ಅವರ ಒಪ್ಪಂದದ ಅವಧಿ ಮುಗಿದಿದ್ದು, ಮುಂದಿನ ರಾಯಭಾರಿ ಯಾರಿರಬಹುದು ಎಂಬ ಊಹೆಗಳು ದಟ್ಟವಾಗಿವೆ.
ವದಂತಿಗಳಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಮತ್ತು ಅಕ್ಷಯ್ ಇವರುಗಳ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಇನ್ಕ್ರೆಡಿಬಲ್ ಇಂಡಿಯಾದ ರಾಯಭಾರಿಯಾಗಲಿ ನಿಮಗೆ ಆಸಕ್ತಿಯಿದೆಯೇ ಎಂಬ ಪ್ರಶ್ನೆಗೆ "ಹೌದು ಇದು ದೊಡ್ಡ ಸಂಗತಿ. ಯಾಕಾಗಬಾರದು. ನನಗೆ ಅದರ ಭಾಗವಾಗಲು ಇಷ್ಟವಿದೆ. ಇದು ಒಳ್ಳೆಯ ಕೆಲಸ" ಎಂದಿದ್ದಾರೆ.
Advertisement