
ಮುಂಬೈ: ಪ್ರೇಮ ಕಥೆಗಳನ್ನು ಹೊಂದಿರುವ ಚಿತ್ರಗಳೇ ನನಗೆ ಅಚ್ಚುಮೆಚ್ಚು ಎಂದು ಬಾಲಿವುಡ್ ನಟಿ ಕತ್ರಿನಾ ಕೈಫ್ ಹೇಳಿದ್ದಾರೆ.
ಭಗ್ನ ಪ್ರೇಮಕಥೆಗಳಿರಬಹುದು ಅಥವಾ ಯಶಸ್ವಿ ಪ್ರೇಮಕಥೆಗಳಿರಬಹುದು, ಎಲ್ಲಾ ರೀತಿಯ ಪ್ರೇಮಕಥೆಗಳು ಇಷ್ಟವಾಗುತ್ತವೆ, ಪ್ರೇಮಕಥೆಗಳು ಉಳಿದೆಲ್ಲಾ ಪ್ರಕಾರಗಳಿಗಿಂತ ಸುಲಭವಾಗಿ ತಲುಪುತ್ತವೆ ಎಂದು ಕತ್ರಿನಾ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ತೆರೆಕಾಣಲಿರುವ ತಮ್ಮ ಮುಂದಿನ ಚಿತ್ರ 'ಫಿಟೂರ್' ಬಗ್ಗೆಯೂ ಮಾತನಾಡಿರುವ ಕತ್ರಿನಾ ಕೈಫ್, ಚಾರ್ಲ್ಸ್ ಡಿಕನ್ಸ್ ಶ್ರೇಷ್ಠ ಕಾದಂಬರಿಯನ್ನು ಈ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದ್ದು ಬಹುನಿರೀಕ್ಷಿತ ಚಿತ್ರವಾಗಿದೆ ಎಂದು ಕತ್ರಿನಾ ಕೈಫ್ ಹೇಳಿದ್ದಾರೆ. ಪ್ರತಿ ಬಾರಿ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಬೇಕಾದರೂ ಹಿಂದಿ ಭಾಷೆಯನ್ನು ಉತ್ತಮಗೊಳಿಸಿಕೊಳ್ಳಲು ಶ್ರಮಿಸುತ್ತೇನೆ ಎಂದು ಕತ್ರಿನಾ ಕೈಫ್ ತಿಳಿಸಿದ್ದಾರೆ.
Advertisement