'ಸುಲ್ತಾನ್' ಬ್ಲಾಕ್ ಬಸ್ಟರ್ ಸಿನೆಮಾ ಎಂದ ಬಾಲಿವುಡ್ ತಾರೆಯರು
ಬಾಲಿವುಡ್ ತಾರೆಯರಾದ ಕರಣ್ ಜೋಹರ್, ಅನುಪಮ್ ಖೇರ್ ಮತ್ತು ಸುಭಾಷ್ ಘಾಯ್ ಅವರು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಸಿನೆಮಾ ಅತಿ ದೊಡ್ಡ ಬ್ಲಾಕ್ ಬಸ್ಟರ್ ಎಂದು ಹೊಗಳಿದ್ದಾರೆ.
'ಸುಲ್ತಾನ್' ಸಿನೆಮಾದಲ್ಲಿ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ
ಮುಂಬೈ: ಬಾಲಿವುಡ್ ತಾರೆಯರಾದ ಕರಣ್ ಜೋಹರ್, ಅನುಪಮ್ ಖೇರ್ ಮತ್ತು ಸುಭಾಷ್ ಘಾಯ್ ಅವರು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಸಿನೆಮಾ ಅತಿ ದೊಡ್ಡ ಬ್ಲಾಕ್ ಬಸ್ಟರ್ ಎಂದು ಹೊಗಳಿದ್ದಾರೆ.
ಯಶ್ ರಾಜ್ ಫಿಲ್ಮ್ ಸ್ಟುಡಿಯೋಸ್ ಆಯೋಜಿಸಲಾಗಿದ್ದ ವಿಶೇಷ ಪ್ರದರ್ಶನದಲ್ಲಿ ಡೈಸಿ ಶಾ, ನಿಖಿಲ್ ದ್ವಿವೇದಿ, ಡೇವಿಡ್ ಧವನ್, ಸಿದ್ಧಾರ್ಥ್ ರಾಯ್ ಕಪೂರ್, ದಿವ್ಯಾ ಕುಮಾರ್ ಖೋಸ್ಲಾ ಮುಂತಾದವರು ಕಂಡುಬಂದರು.
ಸಲ್ಮಾನ್ ಅವರು ತಮ್ಮ ರೋಮ್ಯಾನಿಯನ್ ಗರ್ಲ್ ಫ್ರೆಂಡ್ ಲುಲಿಯಾ ವಾಂತುರ್ ಅವರನ್ನು ಮದುವೆ ಆಗಲಿದ್ದಾರೆ ಎಂಬ ವದಂತಿಗಳ ನಡುವೆ ಲುಲಿಯಾ ಕೂಡ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಅಬ್ಬಾಸ್ ಅಲಿ ಜಫರ್ ನಿರ್ದೇಶಿಸಿರುವ 'ಸುಲ್ತಾನ್' ಸಿನೆಮಾದಲ್ಲಿ ಅನುಷ್ಕಾ ಶರ್ಮಾ ನಾಯಕನಟಿಯಾಗಿ ನಟಿಸಿದ್ದಾರೆ.
ಹುಮಾ ಖುರೇಷಿ, ಕಬೀರ್ ಖಾನ್, ರಿತೇಶ್ ದೇಶಮುಖ್ ಮತ್ತು ದಿಯಾ ಮಿರ್ಜಾ ಕೂಡ 'ಸುಲ್ತಾನ್' ಅದ್ಭುತ ಸಿನೆಮಾ ಎಂದು ಪ್ರಶಂಸಿಸಿದ್ದಾರೆ.