
ಮುಂಬೈ: ಎಲ್ಲ ಕಮರ್ಷಿಯಲ್ ಸಿನೆಮಾಗಳನ್ನು ಗಮನಿಸುವುದಾಗಿ ಹೇಳಿರುವ ನಿರ್ದೇಶಕ ಅನುರಾಗ್ ಕಶ್ಯಪ್, 'ಸುಲ್ತಾನ್' ಮತ್ತು 'ಡಿಶೂಂ' ಸಿನೆಮಾಗಳ ಟ್ರೇಲರ್ ಗಳನ್ನು ಮೆಚ್ಚಿದ್ದರೂ, ಅಂತಹ ಚಿತ್ರಗಳನ್ನು ತಮಗೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಅವರ ಮುಂದಿನ ಚಿತ್ರ 'ರಾಮನ್ ರಾಘವ ೨.೦'ದ 'ಕ್ವಾತಿ-ಎ-ಆಮ್' ಹಾಡಿನ ಚಾಲನೆಯಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಟ್ರೇಲರ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ "ನಾನು ಟ್ರೇಲರ್ ನೋಡಿದೆ ಮತ್ತು ಪ್ರತಿ ಟ್ರೇಲರ್ ಅನ್ನು ಎಲ್ಲರೂ ಆನಂದಿಸುತ್ತಾರೆ. 'ಡಿಶೂಂ' ಟ್ರೇಲರ್ ಕೂಡ ನನಗೆ ಇಷ್ಟವಾಯಿತು, ಆದರೆ ತೊಂದರೆ ಏನೆಂದರೆ ನನಗೆ ಅವುಗಳನ್ನು ಮಾಡಲಾಗುವುದಿಲ್ಲ" ಎಂದಿದ್ದಾರೆ.
'ಬ್ಲ್ಯಾಕ್ ಫ್ರೈಡೆ', 'ಗ್ಯಾಂಗ್ಸ್ ಆಫ್ ವಸೀಪುರ್', 'ಅಗ್ಲಿ' ಇಂತಹ ವಿಭಿನ್ನ ಸಿನೆಮಾಗಳನ್ನು ಸೃಷ್ಟಿಸಿರುವ ಅನುರಾಗ್ ಕಶ್ಯಪ್ ತಮ್ಮ ಮುಂದಿನ ಚಿತ್ರ 'ರಾಮನ್ ರಾಘವ ೨.೦' ಬಿಡುಗಡೆಗೆ ಸಿದ್ಧವಾಗಿದ್ದಾರೆ. ಈ ಸಿನೆಮಾ ಕಾನ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.
ಅವರ ಹಿಂದಿನ ಸಿನೆಮಾ 'ಬಾಂಬೆ ವೆಲ್ವೆಟ್' ನಿರೀಕ್ಷಿತ ಯಶಸ್ಸು ಕೊಡದೇ ಹೋದರು, ನವಾಜುದ್ದೀನ್ ಸಿದ್ಧಿಕಿ ಮತ್ತು ವಿಕ್ಕಿ ಕೌಶಾಲ್ ನಟನೆಯ 'ರಾಮನ್ ರಾಘವ ೨.೦' ಬಹಳ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
Advertisement