ಮುಂಬೈ: ಉಡ್ತಾ ಪಂಜಾಬ್ ಚಿತ್ರಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಚಿತ್ರದ ತಂಡ ಸೆನ್ಸಾರ್ ವಿರುದ್ಧ ಕಾನೂನು ಸಮರಕ್ಕಿಳಿಯಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ನೈಜ ಕಥೆಯಾಧರಿಸಿ ಸಿನಿಮಾ ನಿರ್ದೇಶಿಸಿದ್ದ ಅನುರಾಗ್ ಕಶ್ಯಪ್ ಅವರಿಗೆ ಸೆನ್ಸಾರ್ ಮಂಡಳಿ ಆಘಾತವನ್ನು ನೀಡಿತ್ತು. ಪಂಜಾಬಿನ ಡ್ರಗ್ ಮಾಫಿಯಾ ಸತ್ಯಾಸತ್ಯತೆ ಬಿಚ್ಚಿಡುವ ಉಡ್ತಾ ಪಂಜಾಬ್ ಚಿತ್ರಕ್ಕೆ 89 ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಅನುರಾಗ್ ಕಶ್ಯಪ್ ಅವರು, ಚಿತ್ದಲ್ಲಿ 89 ದೃಶ್ಯಗಳಿಗೆ ಕತ್ತರಿ ಹಾಕಿದರೆ, ಬಹುತೇಕ ಸಿನಿಮಾದ ಆಶಯವನ್ನೇ ಕೊಂದಂತಾಗುತ್ತದೆ. ನಾನು ಭಾರತದಲ್ಲಿದ್ದೆವಾ? ನನಗೆ ಉತ್ತರ ಕೊರಿಯಾದ ಸರ್ವಾಧಿಕಾರದ ಆಡಳಿತದಲ್ಲಿದ್ದಂತೆ ಭಾಸವಾಗುತ್ತಿದೆ ಎಂದು ಹೇಳಿದ್ದರು. ಸೆನ್ಸಾರ್ ಮಂಡಳಿಯ ಕಠಿಣ ನಿರ್ಧಾರದಿಂದ ತೀವ್ರವಾಗಿ ಬೇಸರಗೊಂಡಿರುವ ಉಡ್ತಾ ಪಂಜಾಬ್ ತಂಡ ಇದೀಗ ಸೆನ್ಸಾರ್ ಮಂಡಳಿಯ ನಿರ್ಧಾರದ ವಿರುದ್ಧ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement