
ನವದೆಹಲಿ: ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಾಗಿದ್ದು, ಈ ಸಂಬಂಧ ಮತ್ತೆ ತನಿಖೆಯ ಅಶ್ಯಕತೆಯಿಲ್ಲ ಎಂದು ಕೇಂದ್ರೀಯ ತನಿಖಾ ದಳ ಬಾಂಬೆ ಹೈಕೊರ್ಟ್ಗೆ ಹೇಳಿಕೆ ನೀಡಿದೆ.
ಸಾಕ್ಷ್ಯಾಧಾರಗಳ ಪ್ರಕಾರ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ನೇಮಿಸಬೇಕು ಹಾಗೂ ಸಿಬಿಐ ತಂಡ ತನಿಖೆಯಲ್ಲಿ ಎಫ್ಬಿಐ ಸಹಾಯ ಪಡೆಯಬೇಕು ಎಂದು ಜಿಯಾ ಖಾನ್ ಅವರ ತಾಯಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರೀಯ ತನಿಖಾ ದಳ ಈ ಹೇಳಿಕೆ ನೀಡಿದೆ.
ಜಿಯಾ ಖಾನ್ ಅವರು 2013ರಲ್ಲಿ ಸಂಶಯಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ತಮ್ಮದೇ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದ್ದರು. ಪ್ರಕರಣದ ಪ್ರಾಥಮಿಕ ತನಿಖೆ ನಡೆದ ನಂತರ ಮರು ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗಿತ್ತು.
ಆತ್ಮಹತ್ಯೆಗೆ ಮುಂಚೆ ಜಿಯಾ ಖಾನ್ ಅವರ ಗೆಳೆಯ ಸೂರಜ್ ಪಾಂಚೋಲಿ ಕಳುಹಿಸಿದ್ದ ಸಂದೇಶವನ್ನು ಅಳಿಸಿಹಾಕಿದ್ದಾನೆ ಎಂದು ಸಿಬಿಐ ಹೇಳಿದೆ. ಈ ಹಿಂದೆ ಡಿಸೆಂಬರ್ನಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಸಂದೇಶಗಳನ್ನು ಅಳಿಸಿ ಹಾಕುವಂತೆ ಸೂರಜ್ಗೆ ಆತನ ತಂದೆ ಒತ್ತಾಯಿಸಿದ್ದರು ಎಂದು ಹೇಳಲಾಗಿತ್ತು.
ಜಿಯಾಖಾನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 35 ನಿಮಿಷಗಳ ಕಾಲ ಅಪಾರ್ಟ್ ಮೆಂಟ್ ನಲ್ಲಿದ್ದಳು, ಹೀಗಾಗಿ ಆಕೆಗೆ ಡೆತ್ ನೋಟ್ ಬರೆಯುವಷ್ಟು ಸಮಯ ಸಿಕ್ಕಿತ್ತು, ಫ್ಲ್ಯಾಟ್ ನಲ್ಲಿ ಸಿಕ್ಕ ಡೆತ್ ನೋಟ್ ಜಿಯಾ ಖಾನ್ ಬರೆದಿರುವುದು ಎಂದು ಸಿಬಿಐ ಹೇಳಿದೆ.
Advertisement