ಹೃತಿಕ್ ರೋಷನ್ ಮಾಜಿ ಪತ್ನಿ ವಿರುದ್ಧ ವಂಚನೆ ದೂರು ದಾಖಲು

ಬಾಲಿವುಡ್ ನಟ ಹೃತಿಕ್ ರೊಷನ್ ಮಾಜಿ ಪತ್ನಿ, ವಾಣಿಜ್ಯೋದ್ಯಮಿ ಹಾಗೂ ಇಂಟೀರಿಯರ್ ಡಿಸೈನರ್ ಸುಸ್ಸಾನೆ ಖಾನ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ...
ಸುಸ್ಸಾನೆ ಖಾನ್
ಸುಸ್ಸಾನೆ ಖಾನ್
Updated on

ನವದೆಹಲಿ: ಬಾಲಿವುಡ್ ನಟ ಹೃತಿಕ್ ರೊಷನ್ ಮಾಜಿ ಪತ್ನಿ, ವಾಣಿಜ್ಯೋದ್ಯಮಿ ಹಾಗೂ ಇಂಟೀರಿಯರ್ ಡಿಸೈನರ್ ಸುಸ್ಸಾನೆ ಖಾನ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಸೂಸ್ಸಾನೆ  1.87 ಕೋಟಿ ರೂ ವಂಚನೆ  ಮಾಡಿದ್ದಾರೆಂದು ಪಣಜಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಎಮ್ಗಿ ಎಂಟರ್ ಪ್ರೈಸಸ್ 2013ರಲ್ಲಿ ಸುಸ್ಸಾನೆ ಜತೆಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ಉತ್ತರ ಗೋವಾದ ತಿಸ್ವಾಡಿಯಲ್ಲಿರುವ ನೈರಾ ಕಾಂಪ್ಲೆಕ್ಸ್​ನ ವಾಸ್ತುಶಿಲ್ಪ ಹಾಗೂ ಡಿಸೈನ್ ಸೇವೆಗಳನ್ನು ನಿಗದಿತ ಅವಧಿಯೊಳಗೆ ನೀಡಬೇಕೆಂದು ಒಪ್ಪಂದವಾಗಿತ್ತು. ಆದರೆ ಸುಸ್ಸಾನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ವಿಫಲವಾಗಿದೆ. ಇದರಿಂದ ನಮಗೆ ಅಪಾರ ನಷ್ಟವಾಗಿದೆ ಎನ್ನುವುದು ಕಂಪನಿ ಆರೋಪಿಸಿದೆ.

ಎಮ್ಗಿ ಎಂಟರ್ ಪ್ರೈಸಸ್ ಸುಳ್ಳು ಆರೋಪ ಹೊರಿಸಿದೆ. ನನ್ನ ಹಾಗೂ ಕಂಪನಿ ನಡುವಿನ ಒಪ್ಪಂದವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಇರುವುದೇ ಇದಕ್ಕೆ ಕಾರಣ. ಇದೀಗ ನನ್ನ ಮೇಲೆ ಆರೋಪ ಹೊರಿಸಿ, ಬೆದರಿಕೆಯ ತಂತ್ರ ಅನುಸರಿಸಿತ್ತಿದೆ. ಇದರಿಂದಾಗಿ ನನ್ನ ವ್ಯಕ್ತಿತ್ವಕ್ಕೆ ಹಾನಿಯಾಗಿದೆ. ಮೊದಲು ಕಂಪನಿ ನನಗಾದ ಹಾನಿ ಬರಿಸಲಿ. ನಾನು ಮಾಡಿಕೊಂಡ ಒಪ್ಪಂದದಂತೆ ಉತ್ತಮ ಗುಣಮಟ್ಟದ ಸೇವೆಯನ್ನೇ ನೀಡಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com