ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಶೂಟಿಂಗ್ ನಂತರ ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗುತ್ತಿದ್ದೆ: ಸಲ್ಮಾನ್ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಆಕ್ರೋಶ

ಸುಲ್ತಾನ್ ಚಿತ್ರದ ಶೂಟಿಂಗ್ ನಂತರ ನಾನು ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗುತ್ತಿದ್ದೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ...
Published on

ಮುಂಬಯಿ: ಸುಲ್ತಾನ್ ಚಿತ್ರದ ಶೂಟಿಂಗ್ ನಂತರ ನಾನು ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗುತ್ತಿದ್ದೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸುಲ್ತಾನ್‌ ಚಿತ್ರಕ್ಕಾಗಿ ಕುಸ್ತಿಯ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ತಾವು ಪಟ್ಟ ಪಾಡನ್ನು ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ದಯನೀಯ ಸ್ಥಿತಿಗೆ ಹೋಲಿಸಿಕೊಳ್ಳುವ ಮೂಲಕ ಭಾರೀ ವಿವಾದವನ್ನು ಸೃಷ್ಟಿಸಿದೆ. ಸುಲ್ತಾನ್‌' ಚಿತ್ರದಲ್ಲಿ ಕುಸ್ತಿ ಪಟುವಾಗಿ ಅಭಿನಯಿಸಿರುವ ಸಲ್ಮಾನ್‌ ಖಾನ್‌ ಅವರನ್ನು ಸ್ಪಾಟ್‌ಬಾಯ್‌ಇ ಡಾಟ್‌ ಕಾಮ್‌ ಸಂದರ್ಶಿಸಿತ್ತು. ಈ ಸಂದರ್ಶನದ ವೇಳೆ ಸಲ್ಮಾನ್ ಶೂಟಿಂಗ್ ನ ಅನುಭವವನ್ನು ಈ ರೀತಿಯಾಗಿ ಹಂಚಿಕೊಂಡಿದ್ದರು.

ಸುಲ್ತಾನ್‌ ಚಿತ್ರಕ್ಕಾಗಿ ಕುಸ್ತಿ ಪಂದ್ಯದ ದೃಶ್ಯದ ಆರು ತಾಸುಗಳ ಚಿತ್ರೀಕರಣ ನಡೆದಿತ್ತು. ಆಗ ಕುಸ್ತಿ ಪಟುವಾಗಿ ನಾನು 120 ಕಿಲೋ ತೂಕದ ನನ್ನ ಎದುರಾಳಿಯನ್ನು ಅಖಾಡದಲ್ಲಿ  ಹತ್ತು ಬಾರಿ ಎತ್ತಿ ಹತ್ತು ಬೇರೆ ಬೇರೆ ದಿಕ್ಕಿಗೆ ಎಸೆಯಬೇಕಾಗಿತ್ತು. ಅದೇ ಪ್ರಕಾರ ನನ್ನ ಎದುರಾಳಿ ಕೂಡ ನನ್ನನ್ನು ಅಖಾಡದಲ್ಲಿ ಬೇರೆ ಬೇರೆ ದಿಕ್ಕುಗಳಿಗೆ ಎಸೆಯುವುದಿತ್ತು.

ನಿಜವಾದ ಕುಸ್ತಿ ಸ್ಪರ್ಧೆಯಲ್ಲಿ ಒಬ್ಬ ಪಟುವಿಗೆ ಇಷ್ಟೊಂದು ಬಾರಿ ಎದುರಾಳಿಯನ್ನು ಎತ್ತಿ ಎಸೆಯುವ ಪ್ರಶ್ನೆ ಎದುರಾಗುವುದಿಲ್ಲ. ಆದರೆ ಶೂಟಿಂಗ್‌ ನಲ್ಲಿ ವಿಷಯವೇ ಬೇರೆ; ಇಲ್ಲಿ ಟೇಕ್‌ ಮೇಲೆ ಟೇಕ್‌ ಇರುತ್ತದೆ; ಆ ಮೇಲೆ ರೀಟೇಕ್‌ ಕೂಡ ಇರುತ್ತದೆ. 120 ಕಿಲೋ ತೂಗುವ ನನ್ನ ಎದುರಾಳಿಯನ್ನು ನಾನು ಹತ್ತು ಬಾರಿ ಎತ್ತಿ ಎಸೆಯಬೇಕಿತ್ತು.

ಈ ಒಟ್ಟು ಕುಸ್ತಿ ಶೂಟ್‌ನಲ್ಲಿ ನನ್ನ ದೇಹ ಎಷ್ಟು ದುರ್ಬಲವಾಗಿತ್ತೆಂದರೆ ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ಸ್ಥಿತಿಯಷ್ಟು ದುರ್ಬಲವಾಗಿತ್ತು; ಶೋಚನೀಯವಾಗಿತ್ತು. ರಿಂಗ್‌ ನಿಂದ ನನಗೆ ಹೊರಗೆ ನಡೆದುಕೊಂಡು ಹೋಗಲು ಕೂಡ ಸಾಧ್ಯವಾಗದಷ್ಟು ನೋವು, ದೌರ್ಬಲ್ಯ ನನ್ನನ್ನು ಕಾಡುತ್ತಿತ್ತು. ಆಗ ರೇಪ್‌ಗೆ ಒಳಗಾದ ಮಹಿಳೆಯಂತೆ ನನ್ನ ಸ್ಥಿತಿಯನ್ನು ನಾನು ಅನುಭವಿಸಿದೆ ಎಂದು ಹೇಳಿದ್ದಾರೆ.

ಆದರೆ ಈ ಹೇಳಿಕೆಯಿಂದ ಮಹಿಳೆಯರ ಕುಲಕ್ಕೆ ಅಪಮಾನವಾಗಿದೆ ಎಂದು ಟ್ಟಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com