ಸಮಸ್ಯೆ ನಿವಾರಣೆಗೆ ಕಡಿಮೆ ಮಾತನಾಡುವುದು ಉತ್ತಮ: ಸಲ್ಮಾ ನ್ ಖಾನ್

ಸಮಸ್ಯೆ, ವಿವಾದಗಳಿಂದ ದೂರವಿರಲು ಕಡಿಮೆ ಮಾತನಾಡುವುದು ಉತ್ತಮ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಗುರುವಾರ...
ಬಾಲಿವುಡ್ ನಟ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್

ಮದ್ರಿದ್, ಸ್ಪೈನ್: ಸಮಸ್ಯೆ, ವಿವಾದಗಳಿಂದ ದೂರವಿರಲು ಕಡಿಮೆ ಮಾತನಾಡುವುದು ಉತ್ತಮ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಪೈನ್ ರಾಜಧಾನಿ ಮದ್ರಿದ್ ನಲ್ಲಿ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯ ಪ್ರಚಾರ ವೇಳೆ ಇತರ ಪ್ರಮುಖ ಬಾಲಿವುಡ್ ನಟರೊಂದಿಗೆ ವೇದಿಕೆಯಲ್ಲಿ ಮಾತನಾಡಿದ ಸನ್ಮಾನ್ ಖಾನ್, ಇದೊಂದು ಸುದೀರ್ಘ ಸಂಜೆ ಕಾರ್ಯಕ್ರಮ. ನಾನು ಚಿಕ್ಕದಾಗಿ ಮಾತನಾಡುತ್ತೇನೆ. ಇನ್ನು ಮುಂದೆ ನನ್ನ ಒಳ್ಳೆಯದಕ್ಕೆ ಕಡಿಮೆ ಮಾತನಾಡಬೇಕಾಗಿದೆ ಎಂದು ಹೇಳಿ ಮಾತು ಮುಗಿಸಿದರು. ಸಭಿಕರ ಕಡೆಯಿಂದ ಅದರಲ್ಲೂ ಮಹಿಳಾ ವೃಂದದಿಂದ ಹೆಚ್ಚು ಮಾತನಾಡುವಂತೆ ಒತ್ತಾಯ, ಕರತಾಡನ ಕೇಳಿಬಂತು.

ತಮ್ಮ ಮುಂದಿನ ಚಿತ್ರ ಸುಲ್ತಾನ್ ಪ್ರಚಾರದ ವೇಳೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ, ಚಿತ್ರದಲ್ಲಿ ಕುಸ್ತಿ ಮಾಡಿ ಹೊರಬಂದಾಗ ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗಿತ್ತು ತಮ್ಮ ಸ್ಥಿತಿ ಎಂದು ಹೇಳುವ ಮೂಲಕ ವ್ಯಾಪಕ ಟೀಕೆ, ಆಕ್ರೋಶಕ್ಕೆ ಸಲ್ಮಾನ್ ಖಾನ್ ತುತ್ತಾಗಿದ್ದಾರೆ.

'' ಚಿತ್ರದ ಕುಸ್ತಿ ಶೂಟಿಂಗ್ ಮುಗಿಸಿ ಹೊರಬಂದ ನಂತರ ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗಿತ್ತು ನನ್ನ ಪರಿಸ್ಥಿತಿ. ನನಗೆ ಸರಿಯಾಗಿ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ'' ಎಂದು 50 ವರ್ಷದ ನಟ ಸ್ಪಾಯ್ ಬಾಯ್ ಎಂಬ ಮನರಂಜನಾ ವೆಬ್ ಸೈಟ್ ವೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ಹೇಳಿದ್ದರು.

ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ನಟನೊಬ್ಬ ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಮಹಿಳೆಯರು ಸೇರಿದಂತೆ ಅನೇಕರು ಕಟುವಾಗಿ ಟೀಕಿಸಿದ್ದಾರೆ.
ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ಸಲ್ಮಾನ್ ಖಾನ್ ಗೆ ಛೀಮಾರಿ ಹಾಕಿದ್ದು, ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com