ದೀಪಿಕಾ, ಪ್ರಿಯಾಂಕ ಹಾಲಿವುಡ್ ರಿಟರ್ನ್ಡ್: ಕಾಲೆಳೆದ ಸಲ್ಮಾನ್ ಖಾನ್
ನವದೆಹಲಿ: ಅತ್ಯಾಚಾರ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದ ನಟ ಸಲ್ಮಾನ್ ಖಾನ್ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಛೋಪ್ರಾ ಅವರ ಕಾಲೆಳೆದಿದ್ದಾರೆ.
ಐಫಾ 2016ರ ಸಮಾರಂಭದಲ್ಲಿ ಬಾಲಿವುಡ್ನ ನಟಿಯಾರಾದ ಪ್ರಿಯಾಂಕಾ ಹಾಗೂ ದೀಪಿಕಾ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯಾದರೂ ಏನು ಎಂದು ಪ್ರಶ್ನಿಸುವ ಮೂಲಕ ಸ್ಟಾರ್ ನಟಿಯರ ಕುರಿತು ತಮಾಷೆ ಮಾಡಿದ್ದಾರೆ.
ಮ್ಯಾಡ್ರಿಡ್ನಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಿತ್ರೋತ್ಸವ ಸಮಾರಂಭದಲ್ಲಿ ಸಲ್ಮಾನ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಕೇಶ್ ಓಂ ಪ್ರಕಾಶ್ ಮೇಹರಾ ಅವರ ಮಿರ್ಜ್ಯಾ ಚಿತ್ರದ ಟ್ರೇಲರ್ ಲಾಂಚ್ ಮಾಡಲಾಯಿತು. ನಂತರ ಮಾತನಾಡಿದ ಸಲ್ಮಾನ್, ಇಬ್ಬರು ಬಾಲಿವುಡ್ ನಟಿಯರು ಹಾಲಿವುಡ್ ‘ಹಾಲಿವುಡ್ ರಿಟರ್ನ್ಡ್. ಹಾಲಿವುಡ್ನಿಂದ ಬಾಲಿವುಡ್ಗೆ ಬಾಲಿವುಡ್ನಿಂದ ಹಾಲಿವುಡ್ಗೆ ಜಿಗಿಯುತ್ತಿದ್ದಾರೆ. ಹಾಲಿವುಡ್ ಗೆ ಹೋಗಿರುವ ಇಬ್ಬರು ಬಾಲಿವುಡ್ ಅನ್ನು ಮರೆತಿದ್ದಾರೆ ಎಂದು ಛೇಡಿಸಿದರು.
ನನ್ನ ಪ್ರತಿ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಆದ್ದರಿಂದ ಮೌನಕ್ಕೆ ಶರಣಾಗುತ್ತೇನೆ ಎಂದು ಸಲ್ಮಾನ್ ಖಾನ್ ಹೇಳಿದರು. ಕಾರ್ಯಕ್ರಮದಲ್ಲಿ ಶಾಹಿದ್ ಕಪೂರ್, ಕರಿನಾ ಕಪೂರ್, ಫರ್ಹಾನ್ ಅಖ್ತರ್, ದೀಪಿಕಾ ಪಡುಕೋಣೆ, ಹೃತಿಕ್ ರೋಷನ್, ಪ್ರಿಯಾಂಕಾ ಛೋಪ್ರಾ ಭಾಗವಹಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ