ವಿಜಯ ಮಲ್ಯ ಮತ್ತು ರಾಮ್ ಗೋಪಾಲ್ ವರ್ಮಾ
ಬಾಲಿವುಡ್
ಪ್ರತಿ ಬ್ಯಾಂಕ್ ಗೆ ಒಬ್ಬ ಬಿಕಿನಿ ಸುಂದರಿಯರನ್ನು ಕೊಡಿ: ಮಲ್ಯಗೆ ಆರ್ ಜಿವಿ ಸಲಹೆ
ಪ್ರತಿ ಬ್ಯಾಂಕ್ ಗೆ ಸಾಲದ ಹಣದ ಬದಲು ಒಬ್ಬೊಬ್ಬ ಬಿಕಿನಿ ಸುಂದರಿಯನ್ನು ನೀಡಲಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ
ನವದೆಹಲಿ: ಸದಾ ಬೇರೆಯವರ ಕಾಲೆಳೆಯುತ್ತಾ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ವಿಜಯ್ ಮಲ್ಯ ಸಾಲದ ವಿಷಯ ಸಂಬಂಧಿಸಿದಂತೆ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.
ಸಾವಿರಾರು ಕೋಟಿ ರುಪಾಯಿ ಸಾಲ ಮಾಡಿ ಸದ್ಯ ವಿದೇಶದಲ್ಲಿರುವ ವಿಜಯ ಮಲ್ಯ ಅವರು ಬ್ಯಾಂಕ್ ಸಾಲ ತೀರಿಸಲು ಪ್ರತಿ ಬ್ಯಾಂಕ್ ಗೆ ಸಾಲದ ಹಣದ ಬದಲು ಒಬ್ಬೊಬ್ಬ ಬಿಕಿನಿ ಸುಂದರಿಯನ್ನು ನೀಡಲಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
ವಿಜಯ ಮಲ್ಯ ಬಿಕಿನಿ ಸುಂದರಿಯರನ್ನು ಕೊಟ್ಟರೇ ಬ್ಯಾಂಕ್ ಗಳು ಒಪ್ಪದೇ ಇರಬಹುದು. ಆದರೇ ಈ ಪ್ರಸ್ತಾವನೆಯನ್ನು ಬ್ಯಾಂಕರ್ಸ್ ಒಪ್ಪುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ವಿಜಯ ಮಲ್ಯ ಹಣ ತಂದು ಬಿಕಿನಿ ಸಂದರಿಯರಿಗೆ ನೀಡಿದ್ದಾರೆ. ಹೀಗಾಗಿ ಮಲ್ಯ ಕ್ಯಾಲೆಂಡರ್ ಗರ್ಲ್ ಗಳಾದ ದೀಪಿಕಾ ಪಡುಕೋಣೆ, ನರ್ಗೀಸ್ ಫಕ್ರಿ, ಕತ್ರೀನಾ ಕೈಫ್, ಇಶಾ ಗುಪ್ತಾ ಮುಂತಾದವರೆಲ್ಲಾ ಮಲ್ಯ ತಮ್ಮ ಬ್ಯಾಂಕ್ ಸಾಲ ತೀರಿಸಲು ಕೊಡುಗೆ ನೀಡಬಾರದೇಕೆ ಎಂದು ರಾಮ್ ಗೋಪಾಲ್ ವರ್ಮಾ ಪ್ರಶ್ನಿಸಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ