
ನವದೆಹಲಿ: ಅಮೀರ್ ಖಾನ್ ಕುಸ್ತಿ ಪಟು ಪಾತ್ರದಲ್ಲಿ ನಟಿಸಿರುವ 'ಧಂಗಲ್' ಸಿನೆಮಾ ಬಿಡುಗಡೆಗೂ ಮುಂಚೆ ನಿರೀಕ್ಷೆ-ಕುತೂಹಲಗಳನ್ನು ಹುಟ್ಟು ಹಾಕುತ್ತಿರುವಾಗಲೇ ಅವರ ಮುಂದಿನ ಯೋಜನೆ ಘೋಷಣೆಯಾಗಿದೆ.
ಬಾಲಿವುಡ್ ವದಂತಿಗಳನ್ನು ನಂಬುವುದಾದರೆ, ನಿಖರತೆಯ ನಟ ತಮ್ಮ ಮುಂದಿನ ಚಿತ್ರ 'ಸಿಕ್ರೆಟ್ ಸೂಪರ್ ಸ್ಟಾರ್' ನಲ್ಲಿ ಸಂಗೀತ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಈ ಸಿನೆಮಾವನ್ನು ಇದಕ್ಕೂ ಮುಂಚೆ 'ಆಜ್ ಫಿರ್ ಜೀನೆ ಕಿ ತಮನ್ನಾ ಹೈ' ಎಂದು ಹೆಸರಿಸಲಾಗಿತ್ತು. ಇದು ಅಮೀರ್ ಅವರ ವ್ಯವಸ್ಥಾಪಕ ಅದ್ವೈತ್ ಚೌಹಾನ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ.
ಈ ಚಿತ್ರದಲ್ಲಿ ಅಮೀರ್ ಅವರದ್ದು ನಾಯಕನ ಪಾತ್ರ ಅಲ್ಲದಿದ್ದರೂ, ಪೋಷಕ ನಟನ ಪಾತ್ರವೂ ಅಲ್ಲ. ಮುಖ್ಯಪಾತ್ರಗಳು ಮಗು ಮತ್ತು ತಾಯಿ ಎಂದು ತಿಳಿದುಬಂದಿದ್ದು ಅದಕ್ಕಾಗಿ ನಟರ ಶೋಧ ಪ್ರಗತಿಯಲ್ಲಿದೆ.
ಇದು ಸಂಗೀತಮಯ ಚಿತ್ರವಾಗಲಿದ್ದು, ಅಮಿತ್ ತ್ರಿವೇದಿ ಸಂಗೀತ ನೀಡಲಿದ್ದಾರೆ ಮತ್ತು ಜೂನ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
Advertisement