ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ಅಮಿತಾಬ್, ಕಂಗನಾ, ರಾಜಮೌಳಿ

63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿದ್ದು, ಪಿಕು ಚಿತ್ರದ ನಟನೆಗಾಗಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್...
ಅಮಿತಾಬ್ ಬಚ್ಚನ್, ಕಂಗನಾ ರಣಾವತ್
ಅಮಿತಾಬ್ ಬಚ್ಚನ್, ಕಂಗನಾ ರಣಾವತ್

ನವದೆಹಲಿ: 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿದ್ದು, ಪಿಕು ಚಿತ್ರದ ನಟನೆಗಾಗಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಉತ್ತಮ ನಟ ಪ್ರಶಸ್ತಿ ಹಾಗೂ ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರಕ್ಕಾಗಿ ಕಂಗನಾ ರಣಾವತ್ ಉತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು.

63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಿರು ಚಿತ್ರ ವಿಭಾಗದಲ್ಲಿ 21 ಪ್ರಶಸ್ತಿ ಹಾಗೂ ಚಲನಚಿತ್ರ ವಿಭಾಗದಲ್ಲಿ 51 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಇದೇ ವೇಳೆ ಉತ್ತರ ಚಿತ್ರಕಥೆಗಾಗಿ ಮೂವರು ಪ್ರಶಸ್ತಿ ನೀಡಲಾಗಿದೆ.

ಇನ್ನು ಉತ್ತಮ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರಕ್ಕೂ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಬಾಜಿರಾವ್ ಮಸ್ತಾನಿ ಚಿತ್ರದ ನಿರ್ದೇಶನಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ ಉತ್ತಮ ನಿರ್ದೇಶಕ ಪ್ರಶಸ್ತಿ, ಇದೇ ಚಿತ್ರದಲ್ಲಿ ನೃತ್ಯ ನಿರ್ದೇಶಿಸಿದ್ದ ರೇಮೋ ಡಿಸೋಜಾ ಅವರು ಉತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿ ಪಡೆದರು. ಮಸಾನ್ ಚಿತ್ರದ ಚೊಚ್ಚಲ ನಿರ್ದೇಶನಕ್ಕಾಗಿ ನೀರಜ್ ಗ್ಯಾವನ್ ಇಂದಿರಾ ಗಾಂಧಿ ಪ್ರಶಸ್ತಿ ಸ್ವೀಕರಿಸಿದರು.

ದುಮ್ ಲಗಾ ಖೇ ಹೈಸಾ ಚಿತ್ರದ ಮೊ ಮೊ ಕೇ ದಾಗೆ ಹಾಡಿಗಾಗಿ ಮೋನಾಲಿ ಟಾಕೂಲ್ ಹಾಗೂ ಮರಾಠಿ ಚಿತ್ರ ಕತ್ಯಾರ್ ಕಲ್ಜತ್ ಗೂಸ್ಲಿ ಚಿತ್ರದ ಹಾಡಿಗಾಗಿ ಮಹೇಶ್ ಕಾಲೆ ಉತ್ತಮ ಗಾಯಕಿ ಗಾಯಕ ಪ್ರಶಸ್ತಿ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com