ಅಜಯ್ ದೇವಗನ್
ಅಜಯ್ ದೇವಗನ್

ಪನಾಮ ಪೇಪರ್ಸ್ ನಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಹೆಸರು ಸೇರ್ಪಡೆ

ಪನಾಮ ಪೇಪರ್ಸ್ ದಾಖಲೆಗಳಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹೆಸರು ಕೇಳಿ ಬಂದ ಬೆನ್ನಲ್ಲೇ, ಈ ಪಟ್ಟಿಗೆ ಮತ್ತೊಬ್ಬ...
ನವದೆಹಲಿ: ಪನಾಮ ಪೇಪರ್ಸ್ ದಾಖಲೆಗಳಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹೆಸರು ಕೇಳಿ ಬಂದ ಬೆನ್ನಲ್ಲೇ, ಈ ಪಟ್ಟಿಗೆ ಮತ್ತೊಬ್ಬ ಬಾಲಿವುಡ್ ನಟ ಅಜಯ್ ದೇವಗನ್ ಹೆಸರು ಸೇರ್ಪಡೆಗೊಂಡಿದೆ. 
ಮಾದ್ಯಮದೊಂದರ ವರದಿ ಪ್ರಕಾರ ಅಜಯ್ ದೇವಗನ್ ಅವರು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನ ಮಾರೈಲಿಬೊನ್ ಎಂಟರಟೇನ್ ಮೆಂಟ್ ಕಂಪನಿಯ 1000 ಶೇರುಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. 
ಅಜಯ್ ಈ ಕಂಪನಿಯಲ್ಲಿ 2013ರಲ್ಲಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದು, 2014ರಲ್ಲಿ ರಾಜಿನಾಮೆ ನೀಡಿದ್ದರು. ಅಜಯ್ ದೇವಗನ್ ಮತ್ತು ಅವರ ಪತ್ನಿ ಕಾಜಲ್ ಅವರಿಗೆ ಸೇರಿದ ನೈಸಾ ಯುಗ್ ಎಂಟರಟೇನ್ ಮೆಂಟ್ ಕಂಪನಿ ಹೆಸರಿನಲ್ಲಿ ಈ ಷೇರು ಖರೀದಿಸಿದ್ದಾರೆಂದು ತಿಳಿದು ಬಂದಿದೆ.
ಇನ್ನು ಇದಕ್ಕೆ ಪ್ರತ್ರಿಕ್ರಯಿಸಿರುವ ಅಜಯ್ ದೇವಗನ್ ಆರ್ ಬಿಐ ನಿಬಂಧನೆಗಳ ಅನುಸಾರವೇ ನಾವು ವ್ಯವಹರಿಸಿದ್ದೇವೆ ಎಂದು ಸ್ಪಷ್ಟನೇ ನೀಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com