
ಮುಂಬೈ: ಸರಬ್ಜಿತ್ ಚಿತ್ರ ಸಂಬಂಧ ನಡೆದ ಖಾಸಗಿ ಟಿವಿ ಚಾನೆಲ್ ವೊಂದರಲ್ಲಿ ನಡೆದ ಸಂದರ್ಶನದ ವೇಳೆ ಸಲ್ಮಾನ್ ಖಾನ್ ಬಗ್ಗೆ ಪ್ರಶ್ನಿಸಿದ್ದಕ್ಕೆ ತಾಳ್ಮೆ ಕಳೆದುಕೊಂಡ ಐಶ್ವರ್ಯ ರೈ ಕಾರ್ಯಕ್ರಮದ ನಡುವೆಯೇ ಎದ್ದು ಹೊರ ನಡೆದಿದ್ದಾರೆ.
ಸರಬ್ಜಿತ್ ಚಿತ್ರದ ಸಂದರ್ಶನದ ಮಧ್ಯೆ ಭವಿಷ್ಯದಲ್ಲಿ ಮತ್ತೆ ಸಲ್ಮಾನ್ ಜತೆಗೆ ಚಿತ್ರ ಮಾಡಲು ಬಯಸುತ್ತೀರಾ ? ಎಂದು ಕೇಳಲಾದ ಪ್ರಶ್ನೆಗೆ ಐಶ್ ಎದ್ದು ನಿಂತು ಸಂದರ್ಶನ ನಿಲ್ಲಿಸುವಂತೆ ಸೂಚಿಸಿದ್ರಂತೆ. ಬಳಿಕ ಸಂದರ್ಶನದಿಂದ ಐಶ್ ಹೊರನಡೆದಿದ್ದಾರೆ. ಈ ವೇಳೆ ಸಂದರ್ಶನದ ಕೆಲ ಫೂಟೇಜ್‌ಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ಜತೆಗಿದ್ದ ನಿರ್ಮಾಪಕ ಜಾಕಿ ಭಾಗನಾನಿ ಐಶ್ವರ್ಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಐಶ್ವರ್ಯ ಮಾತ್ರ ತಮ್ಮ ತಾಳ್ಮೆ ಕಳೆದುಕೊಂಡು ಎದ್ದು ಹೊರ ನಡೆದಿದ್ದಾರೆ ಎನ್ನಲಾಗಿದೆ.
ಈ ಮೊದಲು ಇಂಥ ಸಂದರ್ಭ ಎದುರಾದರೇ ಬಹಳ ಜಾಣತನದಿಂದ ನಿಭಾಯಿಸುತ್ತಿದ್ದ ಐಶ್ವರ್ಯ ಈ ಮಟ್ಟಿಗೆ ತಾಳ್ಮೆ ಕಳೆದು ಕೊಂಡು ವರ್ತಿಸಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.
Advertisement