
ನವದೆಹಲಿ: ನಟ ಅಜಯ್ ದೇವ್‌ಗನ್ ನಟಿಸಿರುವ ಶಿವಾಯ್ ಚಿತ್ರದ ಪೋಸ್ಟರ್ ಈಗ ವಿವಾದಕ್ಕೆ ಕಾರಣವಾಗಿದ್ದು, ಅಜಯ್ ದೇವಗನ್ ವಿರುದ್ಧ ದೂರು ದಾಖಲಾಗಿದೆ.
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದೆಹಲಿಯ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕಾರ ದೇವ್‌ಗನ್ ವಿರುದ್ದ ದೂರು ನೀಡಲಾಗಿದೆ.
ಪೋಸ್ಟರ್‌ನಲ್ಲಿ ನಾಯಕ ಅಜಯ್ ದೇವ್‌ಗನ್ ಅವರು ಶೂ ಧರಿಸಿ ಶಿವನ ಚಿತ್ರದ ಮೇಲೆ ಹತ್ತುತ್ತಿರುವು ವಿವಾದಕ್ಕೆ ಕಾರಣವಾಗಿದ್ದು, ಇದು ಶಿವನ ಭಕ್ತರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗೆ ನೋವು ತಂದಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.
ಮೇ 22 ರಂದು ಬಿಡುಗಡೆ ಮಾಡಿದ ಕೆಲ ಪೋಸ್ಟರ್‌ಗಳಲ್ಲಿ ಅಜಯ್ ದೇವ್‌ಗನ್ ಅವರು ಹಿಮದಿಂದ ಮಾಡಿದ ತ್ರಿಶೂಲ ಹಿಡಿದ ಪೋಸ್‌ನಲ್ಲಿ ಕಂಡು ಬಂದಿದ್ದಾರೆ. ಭರ್ಜರಿ ಬಜೆಟ್‌ನ ಅದ್ದೂರಿ ಚಿತ್ರದ ಬಿಡುಗಡೆ ಗೆ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ.
Advertisement