
ನವದೆಹಲಿ: ಪಾಕಿಸ್ತಾನ ಕಲಾವಿದರಿಗೆ ಬೆಂಬಲ ಸೂಚಿಸಿರುವ ನಟ ಸಲ್ಮಾನ್ ಖಾನ್ ವಿರುದ್ಧ ಬಾಲಿವುಡ್ ಗಾಯಕ ಅಜಿತ್ ಭಟ್ಟಾಚಾರ್ಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಪಾಕಿಸ್ತಾನಿ ಕಲಾವಿದರು ಉಗ್ರರಲ್ಲ ಎಂಬ ಸಲ್ಮಾನ್ ಹೇಳಿಕೆಗೆ ಅಜಿತ್ ಭಟ್ಟಾಚಾರ್ಯ ಟ್ವಿಟ್ಟರ್ ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ದೇಶಕ್ಕೆ ನಿಷ್ಠೆ ತೋರದ ಸಲ್ಮಾನ್ ಖಾನ್ ಗೆ ನಾಚಿಕೆಯಾಗಬೇಕು ಎಂದು ಹೇಳಿರುವ ಅವರು ಅವರೊಬ್ಬ ದೇಶ ವಿರೋದಿ ಎಂದು ಕಟು ಶಬ್ದಗಳಿಂದ ಟೀಕಿಸಿದ್ದಾರೆ.
ಪಾಕಿಸ್ತಾನ ಮತ್ತು ಭಾರತೀಯ ಕಲಾವಿದರು ಒಂದು ಅಂಶವನ್ನು ಕಾಮನ್ ಆಗಿ ಹೊಂದಿದ್ದಾರೆ, ಎರಡು ದೇಶದ ಕಲಾವಿದರು ಭಾರತದ ಹಣ, ಹೆಸರು, ಪ್ರೀತಿಯನ್ನು ಎಂಜಾಯ್ ಮಾಡುತ್ತಾರೆ, ಆದರೆ ಇಬ್ಬರು ಭಾರತ ವಿರೋಧಿಗಳು ಎಂದು ಟೀಕಿಸಿದ್ದಾರೆ.
Advertisement