
ಮುಂಬೈ: ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ಕುರಿತ ಬಾಲಿವುಡ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 21 ಕೋಟಿ ಬಾಚಿದೆ.
ಎಂಎಸ್ ಧೋನಿ: ದಿ ಅನ್ ಟೋಲ್ಡ್ ಚಿತ್ರ ಕಳೆದು ಶುಕ್ರವಾರ ದೇಶಾದ್ಯಂತ 4,500 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಒಂದೇ ದಿನದಲ್ಲಿ 21 ಕೋಟಿ ಗಳಿಸುವ ಮೂಲಕ ಮೊದಲ ದಿನ ಅತ್ಯಧಿಕ ಗಳಿಕೆ ಕಂಡ ಆತ್ಮಕಥೆಯನ್ನಾಧರಿಸಿದ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ.
ಧೋನಿ ಪಾತ್ರದಲ್ಲಿ ಮಿಂಚಿರುವ ಸುಶಾಂತ್ ಸಿಂಗ್ ರಜಪೂತ್ ಮನೋಜ್ಞ ಅಭಿನಯ ನೀಡಿದ್ದಾರೆ. ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದಾರೆ.
Advertisement