'ನನಗೆ ದೇಶ ಮೊದಲು': ಚಿತ್ರ ಬಿಡುಗಡೆಗೂ ಮುನ್ನ ಕರಣ್ ಜೋಹರ್ ಹೇಳಿಕೆ

ಪಾಕಿಸ್ತಾನದ ಕಲಾವಿದರ ಪರವಾಗಿ ಮಾತನಾಡಿದ್ದ ಎ ದಿಲ್ ಹೈ ಮುಷ್ಕಿಲ್(ಎಡಿಹೆಚ್ಎಂ) ಚಿತ್ರದ ನಿರ್ದೇಶಕ ಕರಣ್ ಜೋಹರ್ ಈಗ ದೇಶ ಮೊದಲು ನಂತರ ಪಾಕಿಸ್ತಾನದ ಕಲಾವಿದರು ಎಂದು ಹೇಳಿಕೆ ನೀಡಿದ್ದಾರೆ.
ಕರಣ್ ಜೋಹಾರ್
ಕರಣ್ ಜೋಹಾರ್

ಮುಂಬೈ: ಉರಿಯಲ್ಲಿ ಭಯೋತ್ಪಾದಕ ದಾಳಿ ಹಾಗು ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಘಟನಾವಳಿಗಳ ಬಳಿಕ ಪಾಕಿಸ್ತಾನದ ಕಲಾವಿದರ ಪರವಾಗಿ ಮಾತನಾಡಿದ್ದ ಎ ದಿಲ್ ಹೈ ಮುಷ್ಕಿಲ್(ಎಡಿಹೆಚ್ಎಂ) ಚಿತ್ರದ ನಿರ್ದೇಶಕ ಕರಣ್ ಜೋಹರ್ ಈಗ ದೇಶ ಮೊದಲು ನಂತರ ಪಾಕಿಸ್ತಾನದ ಕಲಾವಿದರು ಎಂದು ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿರುವ ಪಾಕ್ ಕಲಾವಿರದು ಪಾಕ್ ಭಯೋತ್ಪಾದನೆಯನ್ನು ಖಂಡಿಸದ ಹಿನ್ನೆಲೆಯಲ್ಲಿ ದೇಶಾದ್ಯಂತ ಪಾಕ್ ಕಲಾವಿದರ ಬಗ್ಗೆ ಅಸಮಾಧಾನ ವ್ಯಕ್ತವಾಗಿ, ಪಾಕಿಸ್ತಾನದ ಕಲಾವಿದರನ್ನು ಬಹಿಷ್ಕರಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಆದರೆ ಕರಣ್ ಜೋಹರ್ ಸೇರಿದಂತೆ ಬಾಲಿವುಡ್ ನ ಹಲವು ನಟ, ನಟಿ ನಿರ್ದೇಶಕರು ಪಾಕ್ ಕಲಾವಿದರ ಪರ ಮಾತನಾಡಿದ್ದರು. ಈಗ ಕರಣ್ ಜೋಹರ್ ನಿರ್ದೇಶನದ ಎ ದಿಲ್ ಹೈ ಮುಷ್ಕಿಲ್ ಚಿತ್ರ ತೆರೆಗೆ ಬರುತ್ತಿದ್ದು, ದೇಶವಿರೋಧಿ ಎಂದು ತಮ್ಮನ್ನು ಬಿಂಬಿಸಲಾಗುತ್ತಿರುವುದರ ಬಗ್ಗೆ ಕರಣ್ ಜೋಹರ್ ಆತಂಕಗೊಂಡಿದ್ದು, ತಮಗೆ ದೇಶ ಮೊದಲು ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೇ, ಈ ಸಂದರ್ಭದಲ್ಲಿ ಪಾಕಿಸ್ತಾನಿ ಕಲಾವಿದರೊಂದಿಗೆ ಕಾರ್ಯನಿರ್ವಹಿಸುವುದಿಲ್ಲ ಎಂದಿದ್ದಾರೆ.
ಇದೆ ವೇಳೆ ಸುಮಾರು 300 ಕ್ಕೂ ಹೆಚ್ಚು ಭಾರತೀಯರು ಕೆಲಸ ಮಾಡಿರುವ ಎ ದಿಲ್ ಹೈ ಮುಷ್ಕಿಲ್ ವನ್ನು ಪರಿಗಣಿಸುವಂತೆ ಕರಣ್ ಜೋಹಾರ್ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com