ನವೆಂಬರ್ 18 ಕ್ಕೆ ನಟ ಸಲ್ಮಾನ್ ಖಾನ್ ವಿವಾಹ?
ಮುಂಬಯಿ: ಹಲವು ವರ್ಷಗಳಿಂದ ಯಾವಾಗ ನಿಮ್ಮ ಮದುವೆ ಎಂದು ಹೋದಲೆಲ್ಲಾ ಕೇಳುತ್ತಿದ್ದ ಪ್ರಶ್ನೆಗೆ ನಟ ಸಲ್ಮಾನ್ ಖಾನ್ ಉತ್ತರ ನೀಡುತ್ತಿದ್ದಾರೆ. ನವೆಂಬರ್ 18ಕ್ಕೆ ಸಲ್ಮಾನ್ ಖಾನ್ ತಮ್ಮ ಗೆಳತಿ ಲೂಲಿಯಾ ನಂಟೂರ್ ಅವರನ್ನು ವಿವಾಹವಾಗಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮದುವೆ ವಿಷಯ ತಿಳಿದ ಸಲ್ಮಾನ್ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. ಸಲ್ಮಾನ್ ತಮ್ಮ ಮದುವೆಯ ದಿನಾಂಕವನ್ನು ಕಡೆಗೂ ಫಿಕ್ಸ್ ಮಾಡಿದ್ದಾರೆ. ಸಲ್ಮಾನ್ ಖಾನ್ ಒಂದು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‌ನ ಹಲವು ದಿಗ್ಗಜರು ಭಾಗಿಯಾಗಿದ್ದರು ಎನ್ನಲಾಗಿದೆ.
ನವೆಂಬರ್ 18 ರಂದು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಮತ್ತು ತಾಯಿ ಸಲ್ಮಾ ಅವರ 52 ನೇ ವಿವಾಹ ವಾರ್ಷಿಕೋತ್ಸವವಿದ್ದು, ಅಂದೇ ತಾವು ವಿವಾಹವಾಗುವುದಾಗಿ ಸಲ್ಮಾನ್ ಹೇಳಿದ್ದಾರೆ ಎನ್ನಲಾಗಿದೆ.
ಮದುವೆಗೆ ಕೇವಲ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ. ಕೇವಲ ಸಲ್ಮಾನ್ ಖಾನ್ ಮತ್ತು ಲುಲಿಯಾ ಕುಟುಂಬಸ್ಥರು ಮಾತ್ರ ಮದುವೆಯಲ್ಲಿ ಪಾಲ್ಲೊಳ್ಳಲಿದ್ದಾರೆ.
ಲುಲಿಯಾ ವೀಸಾ ನವೆಂಬರ್ ನಲ್ಲಿ ಅಂತ್ಯಗೊಳ್ಳಲಿದ್ದು, ಅಷ್ಟರಲ್ಲಿ ಆಕೆ ಸಲ್ಮಾನ್ ಜೊತೆ ವಿವಾಹವಾದರೇ ಭಾರತದಲ್ಲಿ ಇರಲು ವೀಸಾ ಮುಂದುವರಿಯುತ್ತದೆ ಎಂದು ಹೇಳಲಾಗಿದೆ.
ಇನ್ನೂ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ವಿವಾಹದ 2 ನೇವಾರ್ಷಿಕೋತ್ಸವ ನವೆಂಬರ್ 18 ರಂದು ನಡೆಯಲಿದ್ದು, ಇದೇ ದಿನ ಸಲ್ಮಾನ್ ಕೂಡ ವಿವಾಹವಾಗಲು ಬಯಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ