ಮೊಮ್ಮಕ್ಕಳಿಗೆ ಹೃದಯಸ್ಪರ್ಶಿ ಪತ್ರ ಬರೆದ ಅಮಿತಾಬ್ ಬಚ್ಚನ್!

ಬಿಗ್ ಬಿ ಅಮಿತಾಬ್ ಬಚ್ಚನ್ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಭಿನ್ನ ಕೆಲಸ ಮಾಡಿದ್ದಾರೆ. ಅದು ತಮ್ಮ ಪ್ರೀತಿಯ ಮೊಮ್ಮಕ್ಕಳಾದ...
ಅಮಿತಾಬ್ ಬಚ್ಚನ್ ಮೊಮ್ಮಕ್ಕಳಿಗೆ ಪತ್ರ ಬರೆಯುವಾಗಿನ ಚಿತ್ರ(ಫೋಟೋ ಕೃಪೆ-ಬಚ್ಚನ್ ಟ್ವಿಟ್ಟರ್ ಖಾತೆ)
ಅಮಿತಾಬ್ ಬಚ್ಚನ್ ಮೊಮ್ಮಕ್ಕಳಿಗೆ ಪತ್ರ ಬರೆಯುವಾಗಿನ ಚಿತ್ರ(ಫೋಟೋ ಕೃಪೆ-ಬಚ್ಚನ್ ಟ್ವಿಟ್ಟರ್ ಖಾತೆ)
Updated on
ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಭಿನ್ನ ಕೆಲಸ ಮಾಡಿದ್ದಾರೆ. ಅದು ತಮ್ಮ ಪ್ರೀತಿಯ ಮೊಮ್ಮಕ್ಕಳಾದ ನವ್ಯ ನವೇಲಿ ಮತ್ತು ಆರಾಧ್ಯ ಬಚ್ಚನ್ ಗೆ ಪತ್ರ ಬರೆಯುವ ಮೂಲಕ. ಜೀವನದ ಮೌಲ್ಯಗಳ ಪಾಠವನ್ನು ಅವರು ಹೇಳಿಕೊಟ್ಟಿದ್ದಾರೆ.
ಬಿಗ್ ಬಿಯವರ ಪತ್ರದ ಸಾರಾಂಶ: ''ನೀವಿಬ್ಬರೂ ನಿಮ್ಮ ಮುತ್ತಾತರ ಹೆಸರಿನ ದೊಡ್ಡ ಪರಂಪರೆಯನ್ನು ನಿಮ್ಮ ಹೆಗಲಿನಲ್ಲಿ ಹೊತ್ತುಕೊಂಡು ನಡೆಯುತ್ತಿದ್ದೀರಿ. ಆರಾಧ್ಯ ನಿನ್ನ ಹೆಸರ ಹಿಂದೆ ಡಾ.ಹರಿವಂಶ ರಾಯ್ ಬಚ್ಚನ್ ಮತ್ತು ನವ್ಯ ನಿನ್ನ ಹೆಸರ ಹಿಂದೆ ಹೆಚ್.ಪಿ.ನಂದಾ ಅವರ ಪರಂಪರೆಯಿದೆ. ಈ ಇಬ್ಬರೂ ಮುತ್ತಾತಂದಿರು ನಿಮಗೆ ಹೆಸರು, ಗೌರವ, ಕೀರ್ತಿ ನೀಡಿದ್ದಾರೆ.ನೀವಿಬ್ಬರೂ ನಂದ ಅಥವಾ ಬಚ್ಚನ್ ಆಗಿರಬಹುದು, ಆದರೆ ನೀವಿಬ್ಬರೂ ಹುಡುಗಿಯರು ಮತ್ತು ಮುಂದೆ ಮಹಿಳೆಯರಾಗುವವರು.''
''ನೀವಿಬ್ಬರೂ ಮಹಿಳೆಯಾಗಿರುವುದರಿಂದ ಜನರು ಅವರ ಯೋಚನೆಗಳನ್ನು ನಿಮ್ಮ ಮೇಲೆ ಹೇರುತ್ತಾರೆ, ಅವರ ಚೌಕಟ್ಟುಗಳನ್ನು ನಿಮ್ಮ ಮೇಲೆ ಹಾಕುತ್ತಾರೆ. ಜನರು ನಿಮಗೆ ಹೇಗೆ ಬಟ್ಟೆ ಹಾಕಬೇಕು, ಹೇಗೆ ವರ್ತಿಸಬೇಕು, ಯಾರನ್ನು ನೀವು ಭೇಟಿಯಾಗಬಹುದು, ಎಲ್ಲಿಗೆ ಹೋಗಬಹುದು ಎಂದೆಲ್ಲಾ ಹೇಳುತ್ತಾರೆ. ಜನರ ತೀರ್ಮಾನದ ನೆರಳಿನಲ್ಲಿ ನೀವು ಬದುಕಬೇಡಿ. ನಿಮ್ಮ ಬುದ್ದಿವಂತಿಕೆಯಿಂದ ನಿಮ್ಮದೇ ಆಯ್ಕೆಯನ್ನು ಮಾಡಿಕೊಳ್ಳಿ. ನೀವು ಧರಿಸುವ ಸ್ಕರ್ಟ್ ನ ಉದ್ದ ನೋಡಿ ನಿಮ್ಮ ಗುಣ ಅಳೆಯಲು ಬಿಡಬೇಡಿ. ನೀವು ಯಾರ ಜೊತೆ ಸ್ನೇಹ ಬೆಳೆಸಬೇಕು ಎಂಬುದನ್ನು ನಿರ್ಧರಿಸಲು ಬೇರೆಯವರಿಗೆ ಬಿಡಬೇಡಿ. ನಿಮ್ಮ ಮೇಲೆ ಅಧಿಕಾರ ಚಲಾಯಿಸಲು ಬೇರೆಯವರಿಗೆ ಬಿಡಬೇಡಿ. ನಿಮಗೆ ಮದುವೆಯಾಗಬೇಕು ಅನ್ನಿಸಿದಾಗಲಷ್ಟೇ ಮದುವೆಯಾಗಬೇಕೆ ಹೊರತು ಬೇರೆ ಕಾರಣಗಳಿಗಾಗಿ ಆಗಬೇಡಿ.'' ಎಂದು ಜೀವನದ ಪಾಠಗಳನ್ನು ಕಲಿಸಿದ್ದಾರೆ.
ಮುಂದೆ ಬರೆಯುತ್ತಾ, ಜನರು ಮಾತಾಡಬಹುದು. ಕೆಲವು ಕಠೋರ ವಿಷಯಗಳನ್ನು ಹೇಳಬಹುದು. ಆದರೆ ಅವರು ಹೇಳಿದ್ದನ್ನೆಲ್ಲಾ ಕೇಳಬೇಕೆಂದು ಅರ್ಥವಲ್ಲ, ಬೇರೆಯವರು ಏನು ಹೇಳುತ್ತಾರೋ ಎಂದು ತಲೆಕೆಡಿಸಿಕೊಳ್ಳಬೇಡಿ. ಕೊನೆಯಲ್ಲಿ ಯಾವುದೇ ಪರಿಸ್ಥಿತಿಯನ್ನು ಅನುಭವಿಸಬೇಕಾದವರು ನೀವು ಮಾತ್ರ ಹಾಗಾಗಿ ನಿಮ್ಮ ಜೀವನದಲ್ಲಿ ಬೇರೆಯವರು ನಿರ್ಧರಿಸುವುದಕ್ಕೆ ಬಿಡಬೇಡಿ. 
ನವ್ಯ, ನಿನ್ನ ಹೆಸರು, ನಿನ್ನ ಸರ್ ನೇಮ್ ನಿಂದ ಜೀವನದಲ್ಲಿ ಕಷ್ಟ ಬರಲಿಕ್ಕಿಲ್ಲ ಎಂದರ್ಥವಲ್ಲ, ನೀನು ಹೆಣ್ಣಾಗಿರುವುದರಿಂದ ಯಾವ ಪರಿಸ್ಥಿತಿ ಬಂದರೂ ಎದುರಿಸಬೇಕು. 
ಇನ್ನು ಆರಾಧ್ಯ, ಈ ಪತ್ರದಲ್ಲಿ ಬರೆದಿರುವ ವಿಷಯಗಳನ್ನು ನೀನು ನೋಡಿ ಅರ್ಥವಾಗುವ ಹೊತ್ತಿಗೆ ನಾನಿಲ್ಲದಿರಬಹುದು, ಆದರೆ ಇಂದು ನಾನು ಏನು ಹೇಳಿದ್ದೇನೆಯೋ, ಅದು ಮುಂದೆಗೂ ಕೂಡ ಪ್ರಸ್ತುತವಾಗಬಹುದು ಎಂದು ಭಾವಿಸುತ್ತೇನೆ.''
'' ಇಂದು ಜಗತ್ತು ಮಹಿಳೆಯರಿಗೆ ಜೀವಿಸಲು ಕಷ್ಟವೆನ್ನಿಸಬಹುದು. ಆದರೆ ನಿಮ್ಮಂತ ಮಹಿಳೆಯರೇ ಜಗತ್ತಿನ ಸಂಗತಿಗಳನ್ನು ಬದಲಾಯಿಸಬಹುದು ಎಂದು ನಾನು ಭಾವಿಸುತ್ತೇನೆ. ಅದು ಹೇಳಿದಷ್ಟು ಸುಲಭವಲ್ಲ. ನಿಮ್ಮ ಚೌಕಟ್ಟನ್ನು ಅಳವಡಿಸಿಕೊಂಡು, ನಿಮ್ಮ ಆಯ್ಕೆಯ ಮೂಲಕ ಜನರ ತೀರ್ಮಾನವನ್ನು ಮೀರಿ ಬೆಳೆಯಬೇಕು. ಆದರೆ ನೀವು ಮಹಿಳೆಯರಿಗೆ ಉದಾಹರಣೆಯಾಗಿ ಬದುಕಬಹುದು.
ಈ ಕೆಲಸ ಮಾಡಿ, ನಾನು ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ನೀವು ಮಾಡಬಹುದು. ನನ್ನ ಮೊಮ್ಮಕ್ಕಳು ನೀವು ಎಂದು ಗುರುತಿಸಿಕೊಳ್ಳುವುದಕ್ಕಿಂತ ನಿಮ್ಮ ತಾತ ನಾನು ಅಮಿತಾಬ್ ಬಚ್ಚನ್ ಎಂದು ನಾನು ಗುರುತಿಸಿಕೊಳ್ಳುವುದು ನನಗೆ ತೀವ್ರ ಸಂತಸ ಮತ್ತು ಗೌರವ ತರುತ್ತದೆ-ತುಂಬು ಪ್ರೀತಿಯಿಂದ ನಿಮ್ಮ ಅಜ್ಜ ಎಂದು ಕೊನೆ ಸಾಲುಗಳನ್ನು ಬರೆಯುವ ಮೂಲಕ ಹೃದಯಸ್ಪರ್ಶಿ ಪತ್ರವನ್ನು ಬರೆದು ಮುಗಿಸಿದ್ದಾರೆ ಅಮಿತಾಬ್ ಬಚ್ಚನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com