
ಮುಂಬಯಿ: ಗುರಿ ತಲುಪಲು ತನ್ನ ವಿವಾದಾತ್ಮಕ ಹೇಳಿಕೆಗಳು ನನಗೆ ಸಹಾಯ ಮಾಡಿತು ಎಂದು ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆ ಹೇಳಿದ್ದಾಳೆ.
ಶಾರ್ಟ್ ಫಿಲ್ಮ್ 'ದಿ ವೀಕೆಂಡ್'ನ ಪ್ರಮೋಶನ್ ನಲ್ಲಿ ಮಾತನಾಡಿದ ಪೂನಂ ಪಾಂಡೆ ಇಲ್ಲಿವರೆಗೆ ಬರಲು ನಾನು ಬಹಳ ಕಷ್ಟಪಟ್ಟಿದ್ದೇನೆ. ಕೆಲವೊಮ್ಮೆ ಲೈಮ್‌ಲೈಟ್‌ಗೆ ಬರಲು, ಗಮನ ಸೆಳೆಯಲು ವಿವಾದಿತ ಹೇಳಿಕೆ ನೀಡಿದ್ದೇನೆ. ನೀವು ನನ್ನನ್ನು ವಿವಾದಿತೆ ಆಗಿಸಿದ್ದೀರಿ. ಇವತ್ತು ನಾನು ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾಳೆ.
ನನ್ನ ಕುಟುಂಬದ ಯಾವುದೇ ಸದಸ್ಯರಿಗೆ ಬಾಲಿವುಡ್ ನಂಟಿಲ್ಲ, ನಾನು ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಲು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದೆ. ಇಲ್ಲಿ ಮುಂದೆ ಬರಲು ಗಾಡ್ ಫಾದರ್ ಇರಬೇಕು, ಇಲ್ಲವೇ ಇಲ್ಲಿನ ಇಂಡಸ್ಟ್ರಿಯವರ ಜೊತೆ ಸಂಪರ್ಕ ಇರಬೇಕು, ಆದರೆ ಅದ್ಯಾವುದು ಇಲ್ಲದೇ ನಾನು ಬೆಳೆಯಲು ಈ ತಂತ್ರ ಉಪಯೋಗಿಸಿದೆ. ಅದು ನನಗೆ ಫಲ ನೀಡಿತು ಎಂದು ಪೂನಂ ಹೇಳಿದ್ದಾಳೆ.
ಮಾಧುರಿ ದೀಕ್ಷಿತ್ ನನಗೆ ಸ್ಫೂರ್ತಿ ಎಂದು ಹೇಳಿರುವ ಪೂನಂ ಪಾಂಡೆ ಅಭಿನಯದ ದಿ ವಿಕೆಂಡ್ ಚಿತ್ರ ಸೆಪ್ಟಂಬರ್ 24 ರಂದು ರಿಲೀಸ್ ಆಗಲಿದೆ.
Advertisement