ಮುಂಬೈ: ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ತಾವು ಮನೆಯಲ್ಲಿ ವಿರಮಿಸುತ್ತಿದ್ದು, ಗುಣಮುಖರಾಗುತ್ತಿರವುದಾಗಿ ತಿಳಿಸಿದ್ದಾರೆ.
"ಎಲ್ಲರಿಗು ಬೆಳಗಿನ ನಮಸ್ಕಾರ. ನಿಮ್ಮೆಲ್ಲರ ಪ್ರಾಮಾಣಿಕ ಕಾಳಜಿಗೆ, ಪ್ರಾರ್ಥನೆಗೆ, ಹಾರೈಕೆಗೆ, ಪ್ರೀತಿಗೆ, ಹಾಸ್ಯಕ್ಕೆ ಧನ್ಯವಾದಗಳು. ನಾನು ಮನೆಯಲ್ಲಿ ವಿರಮಿಸುತ್ತಿದ್ದೇನೆ ಮತ್ತು ಗುಣಮುಖಳಾಗುತ್ತಿದ್ದೇನೆ" ಎಂದು ವಿದ್ಯಾ ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.