'ಧಂಗಾಲ್' ನೋಡಿದ್ದು, ನನ್ನ ಹುಟ್ಟು ಹಬ್ಬಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ: ಶಬನಾ ಆಜ್ಮಿ
ಖ್ಯಾತ ನಟಿ ಶಬನಾ ಆಜ್ಮಿ ತಮ್ಮ 66 ನೇ ಹುಟ್ಟುಹಬ್ಬವನ್ನು 'ಧಂಗಾಲ್' ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗುವ ಮೂಲಕ ಆಚರಿಸಿಕೊಂಡಿದ್ದಾರೆ. ಇದು ಅವರ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಎಂದು
ಮುಂಬೈ: ಖ್ಯಾತ ನಟಿ ಶಬನಾ ಆಜ್ಮಿ ತಮ್ಮ 66 ನೇ ಹುಟ್ಟುಹಬ್ಬವನ್ನು 'ಧಂಗಾಲ್' ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗುವ ಮೂಲಕ ಆಚರಿಸಿಕೊಂಡಿದ್ದಾರೆ. ಇದು ಅವರ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಎಂದು ಕೂಡ ಬಣ್ಣಿಸಿಕೊಂಡಿದ್ದಾರೆ.
ಭಾನುವಾರ 66 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶಬನಾ, ಚಿತ್ರದ ನಾಯಕ ಅಮೀರ್ ಖಾನ್, ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕಿ ಕಿರಣ್ ರಾವ್ ಅವರನ್ನು ಕೂಡ ಪ್ರಶಂಸಿಸಿದ್ದಾರೆ.
"'ಧಂಗಾಲ್' ನೋಡಿದ್ದು, ನನ್ನ ಹುಟ್ಟುಹಬ್ಬಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ. ಅಮೀರ್ ಖಾನ್, ನಿತೇಶ್ ತಿವಾರಿ, ಕಿರಣ್ ರಾವ್, ಫಾತಿಮಾ, ಸನಾ ಧನ್ಯವಾದಗಳು... ನೀವೆಲ್ಲರೂ ಅದ್ಭುತ" ಎಂದು ಶಬನಾ ಸೋಮವಾರ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ 'ಚಿಲ್ಲರ್ ಪಾರ್ಟಿ' ಮತ್ತು 'ಭೂತ್ ನಾತ್ ರಿಟರ್ನ್ಸ್' ಸಿನೆಮಾಗಳನ್ನು ಮಾಡಿದ್ದ ನಿರ್ದೇಶಕ ತಿವಾರಿ ಅವರ ನಿರ್ದೇಶನಕ ಕ್ರೀಡಾ ಜೀವನಚಿತ್ರದ ಡ್ರಾಮಾ 'ಧಂಗಾಲ್'.
ಈ ಚಿತ್ರದಲ್ಲಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಾತ್ ಪಾತ್ರವನ್ನು ಅಮೀರ್ ಖಾನ್ ನಿರ್ವಹಿಸಿದ್ದಾರೆ.