ಸೈಫ್ ಆಲಿಖಾನ್ ಮೊದಲ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಳಂತೆ ಕರೀನಾ!

ಬಾಲಿವುಡ್ ನ ರಾಯಲ್ ಕಪಲ್ ಎಂದೇ ಪ್ರಖ್ಯಾತಿ ಪಡೆದಿರುವ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಪ್ರೇಮ ಕಥೆಯ ವಿವರ ..
ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್
ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್

ಮುಂಬಯಿ: ಬಾಲಿವುಡ್ ನ ರಾಯಲ್ ಕಪಲ್ ಎಂದೇ ಪ್ರಖ್ಯಾತಿ ಪಡೆದಿರುವ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಪ್ರೇಮ ಕಥೆಯ ವಿವರ ಬಿಚ್ಚಿಟ್ಟಿದ್ದಾರೆ.

ತಮ್ಮ ವೃತ್ತಿಯ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಕರೀನಾ ಕಪೂರ್ ಸೈಫ್ ಅಲಿಖಾನ್ ಮೊದಲ ಬಾರಿಯ ಲವ್ ಪ್ರಪೋಸಲ್ ಅನ್ನು ತಿರಸ್ಕರಿಸಿದ್ದರಂತೆ. ನಂತರ ಎರಡನೇ ಬಾರಿ ಸೈಫ್ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಾಗ ಕರೀನಾ ಒಪ್ಪಿದ್ದಾಗಿ ಖಾಸಗಿ ಚಾನೆಲ್ ಕಾರ್ಯಕ್ರಮದಲ್ಲಿ ಹೇಳಿದ್ದಾಳೆ.

ಪ್ಯಾರಿಸ್ ನಲ್ಲಿ ಭೇಟಿ ಯಾದ ನಂತರ ಕೆಲ ತಿಂಗಳ ನಂತರ ಮೊದಲ ಬಾರಿ ಪ್ರಪೋಸ್  ಮಾಡಿದ್ದರು ಎಂದು ಹೇಳಿದ್ದಾಳೆ.

ಹಿರಿಯ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಸೈಫ್ ಆಲಿಖಾನ್ ತಾಯಿ ಶರ್ಮಿಳಾ ಠಾಗೂರ್ ಗೆ ಪ್ಯಾರಿಸ್ ನಲ್ಲೇ ಪ್ರಪೋಸ್ ಮಾಡಿದ್ದರಂತೆ. ಮೊದಲ ಬಾರಿಗೆ ಪ್ಯಾರಿಸ್ ನಲ್ಲಿ ಶೂಟಿಂಗ್ ನಡೆಯುವಾಗ ಪ್ಯಾರಿಸ್ ನ ರಿಟ್ಜ್ ಹೊಟೇಲ್ ನಲ್ಲಿ ಪ್ರೇಮ ನಿವೇದನೆ ಮಾಡಿದ್ದರು.

ಮತ್ತೆ ಎರಡನೇ ಬಾರಿ ಪ್ರಪೋಸ್ ಮಾಡಿದಾಗ ಯೋಚನೆ ಮಾಡಿ ತಿಳಿಸುವುದಾಗಿ ಹೇಳಿದೆ.ನಂತರ ಎರಡು ದಿನ ಬಿಟ್ಟು ಪ್ರೀತಿಸಲು ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com