ಶಾರುಖ್-ಆನಂದ್ ರೈ ಮುಂದಿನ ಸಿನೆಮಾದಲ್ಲಿ ಆಲಿಯಾ ಭಟ್ ನಟನೆ?
ಆನಂದ್ ರೈ ನಿರ್ದೇಶನದ ಮುಂದಿನ ಸಿನೆಮಾಗೆ ನಾಯಕನಟಿಯ ಶೋಧನೆ ಜಾರಿಯಲ್ಲಿತ್ತು. ಕಳೆದ ಹಲವು ತಿಂಗಳುಗಳಿಂದ ಕೆಲವು ಸೂಪರ್ ಸ್ಟಾರ್ ನಟಿಯರನ್ನು ಕೇಳಿಕೊಂಡಿದ್ದರೂ ಇನ್ನು ಅಂತಿಮವಾಗಿರಲಿಲ್ಲ.
ಆನಂದ್ ರೈ ನಿರ್ದೇಶನದ ಮುಂದಿನ ಸಿನೆಮಾಗೆ ನಾಯಕನಟಿಯ ಶೋಧನೆ ಜಾರಿಯಲ್ಲಿತ್ತು. ಕಳೆದ ಹಲವು ತಿಂಗಳುಗಳಿಂದ ಕೆಲವು ಸೂಪರ್ ಸ್ಟಾರ್ ನಟಿಯರನ್ನು ಕೇಳಿಕೊಂಡಿದ್ದರೂ ಇನ್ನು ಅಂತಿಮವಾಗಿರಲಿಲ್ಲ.
ಈಮಧ್ಯೆ ಶಾರುಖ್ ಖಾನ್ ನಟಿಸುತ್ತಿರುವ ಈ ಚಿತ್ರಕ್ಕೆ ಅವರ ಎದುರು ನಟಿಸಲು ದೀಪಿಕಾ ಪಡುಕೋಣೆ ಅವರನ್ನು ಕೂಡ ಕೇಳಿಕೊಳ್ಳಲಾಗಿತ್ತು. ಆದರೆ ದಿನಾಂಕಗಳು ಹೊಂದಿಕೊಳ್ಳದೇ ಹೋದದ್ದರಿಂದ ದೀಪಿಕಾ 'ಪದ್ಮಾವತಿ' ಸಿನೆಮಾದೊಂದಿಗೆ ಮುಂದುವರೆದಿದ್ದರು.
ಈಗ ಇತ್ತೀಚಿನ ವರದಿಗಳ ಪ್ರಕಾರ ಚಿತ್ರತಂಡ ಆಲಿಯಾ ಭಟ್ ಅವರನ್ನು ನಟನೆಗೆ ಕೇಳಿಕೊಂಡಿದೆಯಂತೆ. ಮೂಲಗಳ ಪ್ರಕಾರ ಇತ್ತೀಚಿಗೆ ಆಲಿಯಾ, ಶಾರುಖ್ ಅವರ ಮನೆಗೆ ಭೇಟಿ ಮಾಡಿದ್ದು, ಸುದೀರ್ಘವಾಗಿ ಸಿನೆಮಾ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಭೇಟಿ ಫಲಪ್ರದವಾಗಿದೆಯೇ ತಿಳಿಯಬೇಕಿದೆ.