ಐಶ್ವರ್ಯ ರೈ
ಐಶ್ವರ್ಯ ರೈ

ಐಎಫ್ಎಫ್ ಎಂನಲ್ಲಿ ಭಾರತದ ರಾಷ್ಟ್ರ ಧ್ವಜಾರೋಹಣ ಮಾಡಿದ ಮೊದಲ ಮಹಿಳೆ ಐಶ್ವರ್ಯ ರೈ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯುವ ಮೆಲ್ಬೋರ್ನ್ ಭಾರತೀಯ ಚಲನ ಚಿತ್ರೋತ್ಸವ(ಐಎಫ್ ಎಫ್ ಎಂ)...
ಮೆಲ್ಬೋರ್ನ್: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯುವ ಮೆಲ್ಬೋರ್ನ್ ಭಾರತೀಯ ಚಲನ ಚಿತ್ರೋತ್ಸವ(ಐಎಫ್ ಎಫ್ ಎಂ) 2017ರಲ್ಲಿ ಭಾರತದ ರಾಷ್ಟ್ರ ಧ್ವಜಾರೋಹಣ ಮಾಡುತ್ತಿದ್ದು, ಈ ಮೂಲಕ ಐಎಫ್ಎಫ್ ಎಂನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ಮೊದಲ ಮಹಿಳಾ ನಟಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಐಎಫ್ಎಫ್ಎಂ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತೀಯ ಚಿತ್ರೋದ್ಯಮದ ಅತಿ ದೊಡ್ಡ ಉತ್ಸವವಾಗಿದ್ದು, ಐಶ್ವರ್ಯ ರೈ ಅವರು ಮೆಲ್ಬೋರ್ನ್ ಫೆಡರೇಷನ್ ಸ್ಕ್ವೇರ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. 
ಧ್ವಜಾರೋಹಣ ಮಾಡಿದ ಚಿತ್ರವನ್ನು ಟ್ವೀಟ್ ಮಾಡಿರುವ ಐಎಫ್ಎಫ್ ಎಂ, ಐಶ್ವರ್ಯ ರೈ ಅವರು ಭಾರತದ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ 70ನೇ ಸ್ವಾತಂತ್ರೋತ್ಸವವನ್ನು ಆಚರಿಸಿದ್ದಾರೆ ಎಂದು ಹೇಳಿದೆ.
ಇನ್ನು ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಬಾಲಿವುಡ್ ನಟಿ, ನನಗೆ ಇಂತಹ ದೊಡ್ಡ ಗೌರವ ನೀಡಿದ್ದಕ್ಕಾಗಿ ಧನ್ಯವಾದಗಳು. ಇಂತಹ ಒಂದು ಹೆಮ್ಮೆಯ ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ. ಇಲ್ಲಿ ಭಾರತದ 70ನೇ ಸ್ವಾತಂತ್ರೋತ್ಸವ ಆಚರಿಸಿದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದರು.

Related Stories

No stories found.

Advertisement

X
Kannada Prabha
www.kannadaprabha.com