ರಾಜ್ ಕಪೂರ್ 93ನೇ ಜನ್ಮ ದಿನಕ್ಕೆ ಲತಾ ಮಂಗೇಷ್ಕರ್ ವಿಶೇಷ ಬರಹ

ಇದು 1948 ರ ಮಾತು, ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್ ಗಾಗಿ ಪ್ರಖ್ಯಾತ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ನಾನು ಹಾಡು ಹಾಡುತ್ತಿದ್ದೆ.
ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್
ಮುಂಬೈ: ಇದು 1948 ರ ಮಾತು, ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್ ಗಾಗಿ ಪ್ರಖ್ಯಾತ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ನಾನು ಹಾಡು ಹಾಡುತ್ತಿದ್ದೆ. ಆಗ ಅದೇ ಕಟ್ಟಡದ ಎರಡನೇ ಅಂತಸ್ತಿನಲ್ಲಿ ರಾಜ್ ಕಪೂರ್ ಅವರ ಸಣ್ಣ ಕಛೇರಿ ಇತ್ತು. ಅನಿಲ್ ಬಿಸ್ವಾಸ್, ರಾಜ್ ಕಪೂರ್ ಅವರನ್ನು ನನ್ನ ಹಾಡು ಕೇಳಲು ಸ್ಟುಡಿಯೋಗೆ ಕರೆದರು. ಅವರು ನನ್ನ ಹಾಡು ಕೇಳಿದರು, ಮತ್ತೇನೂ ಪ್ರತಿಕ್ರಯಿಸದೆ ತೆರಳಿದ್ದರು.  ಅದಾದ ಮರುದಿನ ಅನಿಲ್ ನನಗೆ ಕರೆ ಮಾಡಿ, 'ರಾಜ್ ಕಪೂರ ನಿನ್ನನ್ನು ಮಹಾಲಕ್ಷ್ಮಿ ಕಛೇರಿಗೆ ಬರಹೇಳಿದ್ದಾರೆ' ಎಂದರು. 
ನಾನು ಕೊಲ್ಹಾಪುರದಲ್ಲಿ ಪ್ರಥ್ವಿರಾಜ್ ಕಪೂರ್ ಅವರ 'ಸಿಕಂದರ್' ಚಿತ್ರವನ್ನು ಹದಿನೈದು ಬಾರಿ ವೀಕ್ಷಿಸಿದ್ದೆ. ನಾನು ಅವರ ದೊಡ್ಡ ಅಭಿಮಾನಿ ಕೂಡ. ಹೀಗಾಗಿ ನನಗೆ ಇದೊಂದು ಉತ್ತಮ ಅವಕಾಶ ಎಂದು ನಾನು ಭಾವಿಸಿದ್ದೆ. ನಾನು ಕಛೇರಿಗೆ ಬಂದಾಗ ರಾಜ್ ಕಪೂರ್ ತನ್ನ ಕುರ್ಚಿಯಲ್ಲಿ ಆಸೀನರಾಗಿದ್ದರು.  ನಾನು ಅವರ ಎದುರಿನ ಟೇಬಲ್ ಮೇಲೆ ಕುಳಿತೆ.
"ನೀವು ನನ್ನ ಚಿತ್ರಕ್ಕಾಗಿ ಹಾಡಬೇಕು,  ಅದಕ್ಕೆ ನೀವೆಷ್ಟು ಹಣ ಬಯಸುತ್ತೀರಿ?" ರಾಜ್ ಕಪೂರ್ ಕೇಳಿದಾಗ ನಾನು 'ತಮಗಿಷ್ಟವಿದ್ದಷ್ಟು ಕೊಡಿ' ಎಂದಿದ್ದೆ. ಅವರು ನನಗೆ ಐನೂರು ರೂ. ನೀಡಲು ಮುಂದಾದರು. ರಾಮ್ ಗಂಗೂಲಿ ಸಂಗೀತ ನಿರ್ದೇಶನದಲ್ಲಿ ಶಂಕರ್ ಜಯಕಿಶನ್ ಇಬ್ಬರೂ ಸಂಗೀತ ಸಂಯೋಜನೆ ಮಾಡಿದ್ದರು, ಇವರೆಲ್ಲಾ ಒತ್ಟಾಗಿ ಪ್ರಥ್ವಿ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ನಾನು 'ಬನ್ವಾರಾ' ಚಿತ್ರಕ್ಕಾಗಿ 'ಜಿಯಾ ಬೇಕಾರ್ ಹೇ' ಹಾಡು ಹಾಡಬೇಕಾಗಿತ್ತು. ಶೈಲೇಂದ್ರ ಮತ್ತು ಹಸ್ರತ್ ಜೈಪುರಿ ರಚಿಸಿದ್ದ ಸಾಹಿತ್ಯಕ್ಕೆ ಶಂಕರ್ ಜಯಕಿಶನ್ ಹಾಗು ರಾಮ್ ಸಂಗೀತ ಕೊಡುವವರಿದ್ದರು. ಇದು ಮುಂಡೆ ಆರ್ ಕೆ ಫಿಲ್ಮ್ಸ್ ನ ಸಾರ್ವಕಾಲಿಕ ಸಂಗೀತ ಪಟ್ಟಿಯಲ್ಲಿ ಸ್ಥಾನ ಪಡೆಯಿತು.
ನಂತರ, ಮುಂದಿನ ಚಿತ್ರಗಳಿಗೆ, ಅವರು ನನಗೆ ಮಧುರ ಗೀತೆಗಳಿಗೆ ಹಾಡಲು ಅವಕಾಶ ನೀಡುತ್ತಾರೆ. ಆದರೆ ಲಕ್ಷಾಂತರ ಜನರ ಹೃದಯಗಳನ್ನು ಸ್ಪರ್ಶಿಸುವಂತಹ ಆಲಾಪವನ್ನು ಅವರು ಯಾವಾಗಲೂ ಬಯಸಿದ್ದರು.
'ಆವಾರಾ' ಚಿತ್ರಕ್ಕಾಗಿ 'ಘರ್ ಆಯಾ ಮೇರಾ ಪರದೇಸಿ' ಹಾಡಿಗಾಗಿ ರೆಕಾಂರ್ಡಿಂಗ್ ನಡೆದ ಸಮಯ ಶಂಕರ್ ಜಯಕಿಶನ್ ಸಾಹಿತ್ಯವನ್ನು ಓದಿ ಅದಕ್ಕೆ ತಕ್ಕ ಸಂಗೀತ ನೀಡಿ ನನ್ನಿಂದ ಹಾಡಿಸುತ್ತಿದ್ದರು. ಆದರೆ ತಡವಾಗಿ ಬಂದಿದ್ದ ರಾಜ್ ಕಪೂರ್ ನಮ್ಮ ಇಡೀ ದಿನದ ಪ್ರಯತ್ನವನ್ನೆಲ್ಲಾ ವ್ಯರ್ಥಗೊಳಿಸಿದ್ದರು. ಅವರು ಸಂಪೂರ್ಣ ಹಾಡನ್ನೇ ಬದಲಿಸಿದರು. ಅಷ್ಟೇ ಅಲ್ಲ ಆ ಹಾಡಿನಲ್ಲಿಯೂ ಆಲಾಪವನ್ನು ಸೇರಿಸಿದರು! ಇಷ್ಟೆಲ್ಲಾ ಆಗುವಾಗ ಮದ್ಯಾಹ್ನ ಮೂರು ಗಂಟೆಯಾಗಿತ್ತು. ಆಗ ರಾಜ್ 'ಇನ್ನು ಏರ್ ಗೆ ಹೋಗಲಿ' ಎಂದು ಹೇಳಿದ್ದರು. ಇದಕ್ಕೆ ಮುನ್ನ ರಾಜ್ ಇಡೀ ತಂಡಕ್ಕೆ ಊಟ ತರಿಸ್ದ್ದರು. ನಾವು ಪ್ರತಿಯೊಬ್ಬರೂ ರಸ್ತೆ ಮದ್ಯೆಯೇ ಕುಳಿತು ಊಟ ಮಾಡಿದ್ದು ನನಗೆ ಇಂದೂ ನೆನಪಿದೆ.  ಅಂದಿನ ದಿನಗಳಲ್ಲಿ ಮದ್ಯಾಹ್ನ ಸಮಯ ಅಂತಹಾ ಟ್ರಾಫಿಕ್ ಇರಲಿಲ್ಲ
ರಾಜ್ ಅವರ ಮಗ ರಂಧೀರ್ ಕಪೂರ್ ಅವರ ಚಿತ್ರ "ಕಲ್ ಆಜ್ ಔರ್ ಕಲ್" ಗಾಗಿ ನಾನು ರೆಕಾರ್ಡಿಂಗ್ ಮಾಡುತ್ತಿದ್ದೆ. ರಾಜ್ ಜಿ ರೆಕಾರ್ಡಿಂಗ್ ರೂಂ ಗೆ ಬಂದಿದ್ದರು. ಅಲ್ಲಿ ಅವರು "ಸತ್ಯಂ ಶಿವಂ ಸುಂದರಂ" ಎಂಬ ತಮ್ಮ ಮುಂದಿನ ಚಿತ್ರವನ್ನು ಶೀಘ್ರದಲ್ಲೇ ಪ್ರಾರಂಭಿಸುತ್ತಿರುವುದಾಗಿ ಹೇಳಿದ್ದಲ್ಲದೆ ನನ್ನ ಸೋದರ ಹೃದಯನಾಥ ಮಂಗೇಷ್ಕರ್ ಗೆ ಹಾಡಲು ಅವಕಾಶ ನಿಡುವುದಾಗಿ ಹೇಳಿದ್ದರು.
ಮುಖೇಶ್ ನಿಂದ ಹೃದಯನಾಥ್ ಬಗೆಗೆ ಕೇಳಿದಾಗ ನಾನು ಆಘಾತಕ್ಕೊಳಗಾದೆ. ನನ್ನ ಸೋದರ ನನಗಾಗಿ ಚಿತ್ರದಲ್ಲಿ ಹಾಡಲು ಒಪ್ಪಿದ್ದರು, ಆದರೆ ಪತ್ರಿಕೆಗಳು ಮಾತ್ರ ಬೇರೆಯದೇ ರೀತಿ ಸುದ್ದಿ ಪ್ರಕಟಿಸಿದ್ದವು. ಆಗ ನನಗೆ ರಾಜ್ ಅವರ ಬಗೆಗೆ ಬೇಸರವಾಗಿತ್ತು. ನಾನು ರಾಜ್ ಕಪೂರ್ ಅವರನ್ನು ಭೇಟಿಯಾಗಿ ನನ್ನ ಬೇಸರ ವ್ಯಕ್ತಪಡಿಸಿದ್ದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com