ಶಿವಸೇನಾ ನಾಯಕ ಬಾಳ್ ಠಾಕ್ರೆ ಪಾತ್ರದಲ್ಲಿ ನವಾಜುದ್ದೀನ್‌ ಸಿದ್ದಿಕಿ

ಶಿವಸೇನಾ ಸಂಸ್ಥಾಪಕ ಅಧ್ಯಕ್ಷ ಬಾಳ್ ಠಾಕ್ರೆ ಜೀವನಾಧಾರಿತ ಚಿತ್ರವೊಂದು ಬಾಲಿವುಡ್ ನಲ್ಲಿ ತಯಾರಾಗುತ್ತಿದೆ.
ಬಾಳ್ ಠಾಕ್ರೆ ಪಾತ್ರದಲ್ಲಿ ನವಾಜುದ್ದೀನ್‌ ಸಿದ್ದಿಕಿ
ಬಾಳ್ ಠಾಕ್ರೆ ಪಾತ್ರದಲ್ಲಿ ನವಾಜುದ್ದೀನ್‌ ಸಿದ್ದಿಕಿ
Updated on
ಮುಂಬೈ: ಶಿವಸೇನಾ ಸಂಸ್ಥಾಪಕ ಅಧ್ಯಕ್ಷ ಬಾಳ್ ಠಾಕ್ರೆ ಜೀವನಾಧಾರಿತ ಚಿತ್ರವೊಂದು ಬಾಲಿವುಡ್ ನಲ್ಲಿ ತಯಾರಾಗುತ್ತಿದೆ. 'ಠಾಕ್ರೆ' ಹೆಸರಿನ ಈ ಚಿತ್ರಕ್ಕೆ ಅಭಿಜಿತ್ ಪನ್ಸೆ ಆಕ್ಷನ್ ಕಟ್ ಹೇಳುತ್ತಿದ್ದು ಬಾಲಿವುಡ್ ನಟ  ನವಾಜುದ್ದೀನ್‌ ಸಿದ್ದಿಕಿ ಬಾಳ್ ಠಾಕ್ರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
"ಚಿತ್ರದ ಟೀಸರ್ ಬಿಡುಗಡೆಯಾಗಿದೆ, ಇಂದು ನನಗೆ ಮಹತ್ವದ ದಿನ, ನಾನು ಅವರಂತಹ ಶ್ರೇಷ್ಠ ವ್ಯಕ್ತಿತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ, ನನ್ನ ಪ್ರಕಾರ ಯಾವುದೇ ನಟನು ಸಹ ಠಾಕ್ರೆ ಅವರ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ." 'ಠಾಕ್ರೆ' ಚಿತ್ರದ ಟೀಸರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ನವಾಜುದ್ದೀನ್‌ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.
"ನಾನು ಸಂಜಯ್ ರಾವತ್, ಉದ್ಧವ್ ಠಾಕ್ರೆ, ಅಭಿಜಿತ್ ಮತ್ತು ಟೀಸರ್ ಅನ್ನು ಬಿಡುಗಡೆಗೊಳಿಸಿದ ಬಚ್ಚನ್ ಸರ್ ಅವರಿಗೆ  ಕೃತಜ್ಞರಾಗಿರುತ್ತೇನೆ. ಈ ಚಿತ್ರವೊಂದು ದಾಖಲೆಯಾಗಿರಲಿದೆ ಎನ್ನುವದು ನನಗೆ ತಿಳಿದಿದೆ. ನಾನು ಹೇಗೆ ಮರಾಠಿ ಮಾತನಾಡುತ್ತೇನೆ ಎನ್ನುವ ಕುರಿತು ಎಲ್ಲರಲ್ಲೂ ಕುತೂಹಲವಿದೆ. ಆದರೆ ನನಗೆ ಬಾಳ್ ಠಾಕ್ರೆ ಅವರ ಆಶೀರ್ವಾದವಿದೆ. ಅವರಿಂದ ಸ್ಪೂರ್ತಿ ಹೊಂದಿ ನಾನು ಈ ಪಾತ್ರದಲ್ಲಿ ನಟಿಸುತ್ತಿದ್ದೇನೆ." ನವಾಜುದ್ದೀನ್‌ ಹೇಳಿದರು.
ಟೀಸರ್ ಬಿಡುಗಡೆಗೆ ಆಹ್ವಾನಿಸಿದ್ದಕ್ಕಾಗಿ ಅಮಿತಾಬ್ ಬಚ್ಚನ್ ಧನ್ಯವಾದ ಹೇಳಿದರು. 'ಠಾಕ್ರೆ ಅವರ ಜೀವನವನ್ನು ತೋರಿಸುವುದಕ್ಕೆ ಮೂರು-ಗಂಟೆಗಳ ಚಲನಚಿತ್ರ ತೀರಾ ಸಣ್ಣದು' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com