ಸುನೀಲ್ ಶೆಟ್ಟಿ
ಬಾಲಿವುಡ್
ಬಾಲಿವುಡ್ ನಟ ಸುನೀಲ್ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ ವಿಧಿವಶ
ಬಾಲಿವುಡ್ ನಟ ಸುನೀಲ್ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ ಇಂದು ಮುಂಜಾನೆ 1.30ರ ಸುಮಾರಿಗೆ ವಿಧಿವಶರಾಗಿದ್ದಾರೆ....
ನವದೆಹಲಿ: ಬಾಲಿವುಡ್ ನಟ ಸುನೀಲ್ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ ಇಂದು ಮುಂಜಾನೆ 1.30ರ ಸುಮಾರಿಗೆ ವಿಧಿವಶರಾಗಿದ್ದಾರೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 93 ವರ್ಷದ ವೀರಪ್ಪ ಶೆಟ್ಟಿ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ವೀರಪ್ಪ ಶೆಟ್ಟಿ ಹೋಟೇಲ್ ಉದ್ಯಮಿಯಾಗಿದ್ದರು. ಹಾಗಾಗಿ ಸುನೀಲ್ ಶೆಟ್ಟಿ ಕೂಡಾ ನಟನೆಯ ಜೊತೆ ಜೊತೆಗೆ ಹೋಟೇಲ್ ಉದ್ಯಮವನ್ನು ನಡೆಸಿಕೊಂಡು ಬಂದಿದ್ದಾರೆ. ವೀರಪ್ಪ ಶೆಟ್ಟಿಯವರ ಅಂತಿಮ ಸಂಸ್ಕಾರ ಗುರುವಾರ ನಡೆಯಲಿದೆ. ವೀರಪ್ಪ ಶೆಟ್ಟಿ ಪತ್ನಿ, ಪುತ್ರ ಸುನೀಲ್ ಶೆಟ್ಟಿ ಮತ್ತು ಪುತ್ರಿ ಸುಜಾತಾ ಅವರನ್ನು ಅಗಲಿದ್ದಾರೆ.
2013 ರಲ್ಲಿ ವೀರಪ್ಪ ಶೆಟ್ಟಿ ಅವರು ಪಾರ್ಶ್ವವಾಯು ಪೀಡಿತರಾದರು, ಅಂದಿನಿಂದ ಸುನಿಲ್ ಶೆಟ್ಟಿ ಅವರ ಮನೆಯಲ್ಲೇ ಐಸಿಯು ಸೆಟ್ ಅಪ್ ಮಾಡಲಾಗಿತ್ತು. ಸುನೀಲ್ ಶೆಟ್ಟಿ ಪುತ್ರಿ ಆತಿಥ್ಯ ತನ್ನ ಮುಂದಿನ ಮುಬಾರಕ್ ಚಿತ್ರದ ಸೂಟಿಂಗ್ ಗೆ ತೆರಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ