2017ರ ವಿಶ್ವ ಸುಂದರಿ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾಗಿ ಸುಶ್ಮಿತಾ ಸೇನ್

65ನೇ ವಿಶ್ವ ಸುಂದರಿ ಸ್ಪರ್ಧೆಯ ತೀರ್ಪುಗಾರರ ತಂಡದಲ್ಲಿ ಒಬ್ಬರಾಗಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್...
ಸುಶ್ಮಿತಾ ಸೇನ್
ಸುಶ್ಮಿತಾ ಸೇನ್
Updated on
65ನೇ ವಿಶ್ವ ಸುಂದರಿ ಸ್ಪರ್ಧೆಯ ತೀರ್ಪುಗಾರರ ತಂಡದಲ್ಲಿ ಒಬ್ಬರಾಗಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಭಾಗವಹಿಸುವುದು ದೃಢವಾಗಿದೆ.
41 ವರ್ಷದ ಸುಶ್ಮಿತಾ ಸೇನ್ 1994ರಲ್ಲಿ ಫಿಲಿಫೈನ್ಸ್ ರಾಜಧಾನಿ ಮನಿಲಾದಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದರು. ಅದಾಗಿ 23 ವರ್ಷಗಳು ಕಳೆದ ನಂತರ ವಿಶ್ವ ಸುಂದರಿ ಸ್ಪರ್ಧೆಯ ತೀರ್ಪುಗಾರಳಾಗಿ ಭಾಗವಹಿಸುತ್ತಿರುವುದು ಅತ್ಯಂತ ಸಂತಸವನ್ನುಂಟುಮಾಡಿದೆ ಎಂದು ಸುಶ್ಮಿತಾ ಹೇಳಿದ್ದಾರೆ.
ತುಂಬಾ ಉತ್ಸಾಹಭರಿತ ಹೃದಯದಿಂದ ಸಿದ್ಧಳಾಗಿದ್ದೇನೆ.ನಾನು ತುಂಬಾ ಕಾತರಳಾಗಿದ್ದು, ಭಾವಪರವಶಳಾಗಿದ್ದೇನೆ. 23 ವರ್ಷಗಳ ನಂತರ ಫಿಲಿಫೈನ್ಸ್ ಗೆ ಹೋಗುತ್ತಿರುವುದನ್ನು ಎದುರು ನೋಡುತ್ತಿದ್ದೇನೆ. 1994ರಲ್ಲಿ ಮನಿಲಾದಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದಲ್ಲಿಂದ ವಿಶ್ವ ಸುಂದರಿ ಸ್ಪರ್ಧೆಯೊಂದಿಗಿನ ಪಯಣ ಆರಂಭವಾಯಿತು ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಜೀವನ ಒಂದು ಪೂರ್ಣ ವೃತ್ತವಾಗಿದೆ, ವಿಶ್ವ ಸುಂದರಿ ಗೆದ್ದಲ್ಲಿಂದ ಭಾರತೀಯ ಉಪ ಸಂಸ್ಥೆಯನ್ನು ಹೊಂದಿ ಇದೀಗ ಅದೇ ಸ್ಪರ್ಧೆಯ ತೀರ್ಪುಗಾರಳಾಗಿ ನಿಲ್ಲುವವರೆಗೆ ಒಂದು ಸುತ್ತು ಬಂದಂತಾಗಿದೆ. ಫಿಲಿಫೈನ್ಸ್ ನ ಸ್ನೇಹಿತರಿಗೆ ನೀವೂ ಭಾಗವಹಿಸುತ್ತೀರಾ ಎಂದು ಕೇಳುವವರಿಗೆ ನಾನು ಇದೀಗ ದೃಢಪಡಿಸುತ್ತಿದ್ದೇನೆ, ಹೌದು ನಾನು ಕೂಡ ಮನಿಲಾಗೆ ಬರುತ್ತೇನೆ. ನಿಮ್ಮನ್ನೆಲ್ಲಾ ಫಿಲಿಫೈನ್ಸ್ ನಲ್ಲಿ ಭೇಟಿಯಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಜನವರಿ 30ರಂದು ನಡೆಯುವ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಭಾರತದಿಂದ ರೊಶ್ಮಿತಾ ಹರಿಮೂರ್ತಿ ಭಾಗವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com